ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯವಕಪಾಡಿ | ಹೆಲಿ ಟೂರಿಸಂನ ಮೊದಲ ಹೆಲಿಕಾಪ್ಟರ್ ಭೂಸ್ಪರ್ಶ: ಗ್ರಾಮಸ್ಥರಲ್ಲಿ ಸಂತಸ

Last Updated 27 ಸೆಪ್ಟೆಂಬರ್ 2021, 13:03 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನಲ್ಲಿ ಹೆಲಿ ಟೂರಿಸಂಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೀಗ ಹೆಲಿ ಟೂರಿಸಂಗೆ ಚಾಲನೆ ದೊರಕಿದೆ. ಯೋಜನೆ ಅಂಗವಾಗಿ ಮೊದಲ ಹೆಲಿಕಾಪ್ಟರ್ ಭಾನುವಾರ ಸಮೀಪದ ಕಕ್ಕಬ್ಬೆಯ ಜಂಗಲ್ ಮೌಂಟ್ ಹೆಲಿಪ್ಯಾಡ್ ನಲ್ಲಿ ಭೂಸ್ಪರ್ಶ ಮಾಡಿದೆ.

ಯವಕಪಾಡಿ ಗ್ರಾಮದ ಅಪ್ಪಾರಂಡ ಸಾಗರ್ ಅವರ ಸ್ಥಳದಲ್ಲಿ ಹೆಲಿ ಟೂರಿಸಂನ ಮೊದಲ ಹೆಲಿಕಾಪ್ಟರ್ ಲ್ಯಾಂಡ್ ಆದ ಸಂದಭ೯ ಕಕ್ಕಬ್ಬೆ ಕುಂಜಿಲ ಗ್ರಾಮಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ್ ಅಯ್ಯಪ್ಪ, ಗ್ರಾಮಸ್ಥರಾದ ಬೊಳಿಯಾಡಿರ ಸಂತು, ಅಪ್ಪಾರಂಡ ಸಾಗರ್, ಅಪ್ಪಾರಂಡ ಭವಾನಿ ಗಣಪತಿ, ಅಪ್ಪಾರಂಡ ಮಂದಣ್ಣ, ಪಾಂಡಂಡ ನರೇಶ್, ಅಂಜಪರವಂಡ ಕುಶಾಲಪ್ಪ, ಅಂಜಪರವಂಡ ಸಾಬು, ಐನಮಂಡ ರೈನಾ, ಮಾದಂಡ ಉಮೇಶ್, ನಾಟೋಳಂಡ ಶಂಭು ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.

ಕಕ್ಕಬ್ಬೆ-ಕುಂಜಿಲ ಗ್ರಾಮಪಂಚಾಯತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಮಾತನಾಡಿ ಹೆಲಿಟೂರಿಸಂ ಮೂಲಕ ಯವಕಪಾಡಿ ಗ್ರಾಮ ಜಿಲ್ಲೆಯಲ್ಲಿ ಹೆಸರು ಮಾಡಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕೆ ಹೆಲಿ ಟೂರಿಸಂ ಹೊಸ ಆಯಾಮ ನೀಡಲಿದೆ ಎಂದರು.

ಆರು ಗಂಟೆಗಳ ರಸ್ತೆ ಪ್ರಯಾಣದ ಬದಲಾಗಿ ಕೇವಲ 40 ನಿಮಿಷದಲ್ಲಿ ಬೆಂಗಳೂರಿಂದ ಪ್ರವಾಸಿಗರು ಹೆಲಿ ಕಾಪ್ಟರ್ ಮೂಲಕ ಕೊಡಗಿನ ಗ್ರಾಮ ತಲುಪಬಹುದು. ಅಂತೆಯೇ ತುರ್ತು ಸಂದರ್ಭದಲ್ಲಿ ಹೆಲಿ ಆಂಬ್ಯುಲೆನ್ಸ್ ಸೇವೆಗೂ ಇದು ಸಹಕಾರಿ ಆಗಿದೆ ಎಂದು ಕಕ್ಕಬ್ಬೆ ಗ್ರಾಮದ ಪ್ರಮುಖರು ಸಂತೋಷದಿಂದ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT