ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮನಮೂರ್ತಿಯ ಹಾಕಿ ಪ್ರೀತಿ

ರಾಷ್ಟ್ರಮಟ್ಟದ ಕ್ರೀಡೆಗೆ ಮಕ್ಕಳನ್ನು ಸಜ್ಜುಗೊಳಿಸುವ ಪರಿಣಿತ ಶಿಕ್ಷಕ ಅರುಣ್
Last Updated 15 ಡಿಸೆಂಬರ್ 2016, 10:54 IST
ಅಕ್ಷರ ಗಾತ್ರ

ಗೋಣಿಕೊಪ್ಪಲು:  ಹಾಕಿ ಕೊಡಗಿನ ಪ್ರಮುಖ ಕ್ರೀಡೆ. ಇಲ್ಲಿ ಪುಟ್ಟ ಹೆಜ್ಜೆಗಳ ನ್ನಿಡುವ ಪುಟಾಣಿಗಳೂ ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದಿರುತ್ತಾರೆ. ಶಾಲೆಗೆ ಸೇರುವ ವೇಳೆಗೆ ಮೈದಾನದಲ್ಲಿ ಆಡುವ ಕೌಶಲ ಬೆಳೆಸಿಕೊಳ್ಳುತ್ತಾರೆ. ಇಂತಹ ಮಕ್ಕಳನ್ನು ತಿದ್ದಿ ತೀಡಿ ಅವರು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ದೈಹಿಕ ಶಿಕ್ಷಣ ಶಿಕ್ಷಕ ರಲ್ಲಿ ಪೊನ್ನಂಪೇಟೆ ಸೇಂಟ್ ಅಂಥೋಣಿ ಶಾಲೆಯ ಶಿಕ್ಷಕ ಎಚ್.ಎನ್. ಅರುಣ್‌  ಕೂಡಾ ಒಬ್ಬರು.

ಅರುಣ್‌  ಹಾಕಿ ಕ್ರೀಡೆಯಲ್ಲಿ ನುರಿತ ಅಧ್ಯಾಪಕ. ಇವರ ಗರಡಿ ಯಲ್ಲಿ ಬೆಳೆದ ನೂರಾರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ಕೆಲವರು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಆಡುವ ಅರ್ಹತೆ  ಗಳಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದ ಪ್ರಮುಖ ಆಟಗಾರ ಎಸ್‌.ಕೆ.ಉತ್ತಪ್ಪ, ರಾಷ್ಟ್ರೀಯ ಮಹಿಳಾ ಜೂನಿಯರ್‌ ತಂಡದ ತರಬೇತಿ ಶಿಬಿರದಲ್ಲಿರುವ ಲೀಲಾವತಿ ಕೆಲ ದಿನಗಳ ಕಾಲ ಅರುಣ್‌  ಅವರ ಮಾರ್ಗದರ್ಶನದಲ್ಲಿ  ಬೆಳೆದವರು.

14 ವರ್ಷಗಳಿಂದ ಸೇಂಟ್‌ ಅಂಥೋಣಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅರುಣ್‌ ಅವರು 6 ಬಾರಿ ತಮ್ಮ ಶಾಲೆಯ ತಂಡವನ್ನು  ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ. 14 ವರ್ಷದೊಳ ಗಿನ ಬಾಲಕರು  2009ರಲ್ಲಿ  ಛತ್ತೀಸ್‌ ಗಡ, 2010ರಲ್ಲಿ ಅಮೃತಸರ್‌, 2015 ರಲ್ಲಿ ರಾಂಚಿ, 2016ರಲ್ಲಿ ಹರಿಯಾಣದ ರೋಹಟಕ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಆಡಿದ್ದಾರೆ.

ನೋಡಲು ಮಕ್ಕಳಷ್ಟೇ ಎತ್ತವಿರುವ ಈ ವಾಮನ ಮೂರ್ತಿ ಶಾಲೆಗೆ ಬಂದ ಕೂಡಲೇ ವಿದ್ಯಾರ್ಥಿಗಳ ಕೈಗೆ ಸ್ಟಿಕ್‌ ಕೊಟ್ಟು ಆಟದಲ್ಲಿ ತಲ್ಲೀನರಾಗುತ್ತಾರೆ. ರಜೆ ದಿನಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ತರಬೇತಿ ನೀಡುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿರುವಾಗಲೇ ಇವರು ಹಾಕಿ ಬಗ್ಗೆ ಒಲವು ಬೆಳೆಸಿಕೊಂಡಿದ್ದರು.

ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  ಚಿಟ್ಟಿಯಪ್ಪ ಮೇಸ್ಟ್ರ್ ಮಾರ್ಗ ದರ್ಶನದಲ್ಲಿ  ಪರಿಣತಿ ಪಡೆದು ಕೊಂಡರು. ಮರದ ಹಾಗೂ ಬಿದಿರಿನ ಹಾಕಿ ಸ್ಟಿಕ್‌ನಲ್ಲಿ  ಕಲ್ಲು ಹಾಗೂ ಚೆಂಡು ಉರುಳಿಸುತ್ತಾ ಆಡು ತ್ತಿದ್ದ ಅರುಣ್‌  ಮುಂದೆ ಕಾಲೇಜು ತಲುಪುತ್ತಿ ದ್ದಂತೆ  ರಾಜ್ಯ ಮಟ್ಟದ ಟೂರ್ನಿಯಲ್ಲಿ ಆಡುವಂತಾದರು.

ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುವಾಗ ವಿಜಯ ಪುರ ಮತ್ತು ಮೈಸೂರಿ ನಲ್ಲಿ ನಡೆದ ರಾಜ್ಯ ಮಟ್ಟದ ಟೂರ್ನಿಯಲ್ಲಿ ತಂಡವನ್ನು ಪ್ರತಿ ನಿಧಿಸಿದ್ದರು.

ಅರುಣ್‌  ಹಾಕಿ ಮತ್ತು ಫುಟ್‌ಬಾಲ್‌ನಲ್ಲಿ  ರಾಜ್ಯ ಮಟ್ಟದ ತೀರ್ಪು ಗಾರರೂ ಆಗಿ ಕಾರ್ಯ ನಿರ್ವಹಿಸಿ ದ್ದಾರೆ. ವಿದ್ಯಾರ್ಥಿ ಗಳಿಗೆ ಫುಟ್‌ಬಾಲ್‌, ವಾಲಿ ಬಾಲ್‌, ಹ್ಯಾಂಡ್‌ ಬಾಲ್‌, ಬ್ಯಾಡ್ಮಿಂ ಟನ್‌, ಕಬಡ್ಡಿ ತರಬೇತಿಯನ್ನು ನೀಡುತ್ತಿ ದ್ದಾರೆ. ಸೇಂಟ್‌ ಆನ್ಸ್‌ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೇಚಂಡ ಪ್ರಸನ್ನ ನೀಡಿದ ಮಾರ್ಗದರ್ಶನದಿಂದ ವಿದ್ಯಾರ್ಥಿ ಗಳನ್ನು ರಾಷ್ಟ್ರಮಟ್ಟಕ್ಕೆ ಕರೆದೊ ಯ್ಯಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅರುಣ್‌ .

ಅರುಣ್‌  ಅವರ ಪ್ರತಿಭೆ ಮತ್ತು ಕರ್ತವ್ಯ ನಿಷ್ಠೆ  ಗುರುತಿಸಿದ ಶಿವ ಮೊಗ್ಗ ಜಿಲ್ಲೆಯ ಸಾಗರ ಫುಟ್‌ ಬಾಲ್‌ ಕ್ಲಬ್‌, ಪೊನ್ನಂಪೇಟೆ ಸಾರ್ವಜನಿಕರು, ಸಾರ್ವ ಜನಿಕ ಶಿಕ್ಷಣ ಇಲಾಖೆ, ವಿರಾಜಪೇಟೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸನ್ಮಾನಿಸಿ ಗೌರವಿಸಿವೆ. ಅರುಣ್‌  ಹಾಕಿ ಕೂರ್ಗ್‌ ಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಇವರು ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮೋರಿವಾದ್ಯ ಕಲಾವಿದ ಅಮ್ಮತ್ತಿಯ ನರಸಯ್ಯ ಅವರ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT