ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಬೇಸಿಗೆ ಮುಂಜಾನೆ ಮಂಜಿನ ರಾಶಿ

Last Updated 12 ಮಾರ್ಚ್ 2023, 5:39 IST
ಅಕ್ಷರ ಗಾತ್ರ

ಕೆಜಿಎಫ್‌: ಬೇಸಿಗೆಯ ಧಗೆ ಹೆಚ್ಚುತ್ತಿದ್ದಂತೆಯೇ ಸ್ವೆಟರ್‌, ಮಫ್ಲರ್‌, ಟೋಪಿಗಳನ್ನು ತ್ಯಜಿಸಿದ್ದ ನಗರದ ಜನತೆ ಶನಿವಾರ ಮುಂಜಾನೆ ಚಳಿ ಮಿಶ್ರಿತ ಮಂಜಿನ ವಾತಾವರಣ ಕಂಡು ವಿಸ್ಮಯಗೊಂಡರು.

ಶಿವರಾತ್ರಿ ನಂತರ ಶಿವ ಶಿವ ಎಂದು ಚಳಿ ಹೋಗುತ್ತದೆ ಎಂಬ ನಾಣ್ಣುಡಿಗೆ ವಿರುದ್ಧವಾಗಿ ಬೆಳಿಗ್ಗೆ ಸೂರ್ಯೋದಯದ ನಂತರವೂ ನಗರದ ಬಹುಭಾಗದಲ್ಲಿ ಮಂಜಿನ ವಾತಾವರಣ ಶುರುವಾಯಿತು. ಅದರಲ್ಲಿಯೂ ಸದಾ ತಣ್ಣಗೆ ಇರುವ ಹೆನ್ರೀಸ್ ಡೌನ್‌ ಪ್ರದೇಶದಲ್ಲಿ ರಸ್ತೆ ಕಾಣದಷ್ಟು ತೀವ್ರತೆಯಲ್ಲಿ ಮಂಜು ಹರಡಿತ್ತು.

ಬೆಮಲ್‌ ಕಾರ್ಖಾನೆಗೆ ಕೆಲಸಕ್ಕೆ ಹೋಗುವವರು, ಬಂಗಾರಪೇಟೆಗೆ ಹೋಗಿ ರೈಲು ಹಿಡಿಯುವ ಬೈಕ್ ಸವಾರರು ಮಂಜಿನ ಹಿತವಾದ ಅನುಭವವನ್ನು ಅನುಭವಿಸಿದರು.

ಚಳಿ ಹೋಯಿತು ಎಂದು ಬೆಚ್ಚನೆಯ ಉಡುಪು ಧರಿಸದೆ ಬಂದ ಬೈಕ್ ಸವಾರರು ತಣ್ಣನೆಯ ವಾತಾವರಣದಲ್ಲಿ ಚಳಿಯ ಮುದ ಕಂಡರು. ಬಿಸಿಲಿನ ತೀವ್ರತೆ ಹೆಚ್ಚುವ ತನಕ ಮಂಜು ಎಲ್ಲೆಡೆ ಆವರಿಸಿತ್ತು.

ನಗರದ ಬಹುತೇಕ ಪ್ರದೇಶದಲ್ಲಿ ಸೈನೈಡ್ ಗುಡ್ಡಗಳು ಇರುವುದರಿಂದ ಸಾಮಾನ್ಯವಾಗಿ ಅದರ ಅಕ್ಕಪಕ್ಕದ ಜಾಗಗಳು ಸದಾ ತಣ್ಣನೆಯ ವಾತಾವರಣ ಹೊಂದಿರುತ್ತವೆ. ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ. ಶನಿವಾರದ ವಾತಾವರಣದ ಕೆಲವು ದಿನಗಳ ಹಿಂದಿನ ಚಳಿಗಾಲದ ವಾತಾವರಣದ ಕಾಲಕ್ಕೆ ಕರೆದೊಯ್ಯಿತು ಎಂದು ನಿವಾಸಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT