ಭಾನುವಾರ, ಏಪ್ರಿಲ್ 11, 2021
29 °C

ಕೋಲಾರ: ಶಾಸಕರಿಗೆ ನಿಂದನೆ; ಆಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸಾರಿಗೆ ನೌಕರರ ಮುಷ್ಕರ ಸಂಬಂಧ ಹೇಳಿಕೆ ನೀಡಿದ್ದ ತಿಪಟೂರು ಶಾಸಕ ಬಿ.ಸಿ.ನಾಗೇಶ್‌ ಅವರನ್ನು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಾಗರಾಜು ಎಂಬುವರು ಅವಾಚ್ಯವಾಗಿ ನಿಂದಿಸಿದ್ದು, ಇದರ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ವೈರಲ್‌ ಆಗಿದೆ.

ಪ್ರಯಾಣಿಕರೊಬ್ಬರ ಕರೆಗೆ ಪ್ರತಿಕ್ರಿಯಿಸಿದ್ದ ನಾಗೇಶ್‌ ಅವರು, ‘ಸಾರಿಗೆ ನೌಕರರಿಗೆ ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ. ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿರುವ ಕಂಡಕ್ಟರ್‌ಗಳನ್ನು ಹಿಡಿದು ಹೊಡೆಯಿರಿ’ ಎಂದು ಹೇಳಿದ್ದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಹರಿದಾಡಿತ್ತು.

ಶಾಸಕರ ಹೇಳಿಕೆಯಿಂದ ಆಕ್ರೋಶಗೊಂಡ ನಾಗರಾಜು, ‘ನಾಗೇಶ್‌ ಅವರಿಗೆ ತಾಕತ್‌ ಇದ್ದರೆ ಸಾರಿಗೆ ನೌಕರರನ್ನು ಮುಟ್ಟಲಿ. ಎ.ಸಿ ಕೊಠಡಿಯಲ್ಲಿ ಕುಳಿತು ಲಂಚ ತಿಂದು ಇಷ್ಟೆಲ್ಲಾ ಮಾತಾಡುತ್ತೀರಾ’ ಎಂದು ಮನಸೋಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು