ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜಾನೆಗೆ ನಷ್ಟವಾಗಿದ್ದರೆ ಕ್ರಮ

ಗಣಿ, ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ ಪಾಟೀಲ ಜಲ್ಲಿ ಕ್ರಷರ್‌ಗಳಿಗೆ ಭೇಟಿ
Last Updated 1 ಜನವರಿ 2021, 2:39 IST
ಅಕ್ಷರ ಗಾತ್ರ

ಮಾಲೂರು: ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ ಪಾಟೀಲ ಅವರು ಗುರುವಾರ ತಾಲ್ಲೂಕಿನ ಟೀಕಲ್ ವ್ಯಾಪ್ತಿಯಲ್ಲಿರುವ ಜಲ್ಲಿ ಕ್ರಷರ್‌ಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.

ನಂತರ ಮಾತನಾಡಿ, ಗಣಿ ಇಲಾಖೆ ಸಚಿವರಾಗಿ ರಾಜ್ಯದ ಎಲ್ಲ ಜಲ್ಲಿ ಕ್ರಷರ್‌ಗಳಿಗೆ ಭೇಟಿ ನೀಡಲಾಗುತ್ತಿದೆ. ಇಂದು ಸಂಸದರ ಜತೆ ಟೇಕಲ್ ಹೋಬಳಿಯ ಕ್ರಷರ್‌ಗಳಿಗೆ ಭೇಟಿ ನೀಡಲಾಗಿದೆ. ಹಲವಾರು ನ್ಯೂನತೆಗಳು ಕಂಡು ಬಂದಿವೆ. ನಿಗದಿತ ಜಾಗ ಬಿಟ್ಟು ಗಣಿಗಾರಿಕೆಯಿಂದ ನಷ್ಟ್ ಮಾಡಿರುವ ಮಾಹಿತಿ ಇದೆ. ಗಡಿ ಉಲ್ಲಂಘನೆ, ಅಕ್ರಮವಾಗಿ 30 ಎಂ.ಎಂ ಜಲ್ಲಿ ,ವೇಬ್ರಿಡ್ಜ್‌ಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.

ಕಳೆದ ಬಾರಿ ನಡೆಸಿದ ಡ್ರೋನ್‌ ಸರ್ವೆಯಲ್ಲಿ ಕೆಲವು ನ್ಯೂನತೆಗಳು ಇದ್ದವು. ಮುಖ್ಯಮಂತ್ರಿ ಸೂಚನೆಯಂತೆ ನೂತನವಾಗಿ ಡ್ರೋನ್‌ ಸರ್ವೆ ಮಾಡಲಾಗುವುದು
ಎಂದರು.

ನಂತರ ಸುದ್ದಿಗಾರೊಂದಿಗೆ ಶಾಸಕ ಕೆ.ವೈ.ನಂಜೇಗೌಡ, ಇಲ್ಲಿಯವರೆಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರು ಜಲ್ಲಿ ಕ್ರಷರ್ ಬಗ್ಗೆ ಮಾಹಿತಿ ಪಡೆಯಲು ಬಂದಿರಲಿಲ್ಲ. ಜಲ್ಲಿ ಕ್ರಷರ್‌ಗಳ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಸಂಸದರು ವೈಯಕ್ತಿವಾಗಿ ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಈ ಹಿಂದೆ ಸರ್ಕಾರ ಡ್ರೋನ್‌ ಸರ್ವೆ ನಡೆಸಿತ್ತು. ಅದು ಸರಿಯಿಲ್ಲ. ಇಲ್ಲಿನ 10 ಕ್ರಷರ್‌ಗಳಿಂದ ₹10 ಕೋಟಿ ಸರ್ಕಾರಕ್ಕೆ ದಂಡ
ಕಟ್ಟಿ ನಂತರ ಕ್ರಷರ್ ಚಾಲನೆ ಮಾಡುತ್ತಿದ್ದೇವೆ. ಉಳಿದಂತೆ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಚರ್ಚೆ ಮಾಡುವುದು ಬೇಡ. ಗಾಳಿಯಲ್ಲಿ ಬಂದವರು ಗಾಳಿಯಲ್ಲೇ ಹೋಗುತ್ತಾರೆ ಎಂದು ಹೆಸರು ಹೇಳದೆ ಸಂಸದರಿಗೆ ಟಾಂಗ್ ಕೊಟ್ಟರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಸಚಿವರ ಭೇಟಿ ರಾಜಕೀಯ ಪ್ರೇರಿತವಲ್ಲ. ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದರು.

ಜಿಲ್ಲಾ ವಿಭಾಗಾಧಿಕಾರಿ ಸೋಮಶೇಕರ್, ತಹಶೀಲ್ದಾರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT