ಕೋಲಾರ: ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಮೇಲೆ ಹಲ್ಲೆ ನಡೆದಿದೆ.

ಗ್ರಾಮದ ಮುನೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕ (ಮೈಕ್) ಹಾಕಿದ್ದರು. ಓದಲು ತೊಂದರೆ ಆಗುತ್ತಿದ್ದು, ಸೌಂಡ್ ಕಡಿಮೆ ಮಾಡುವಂತೆ ರಾಮಯ್ಯ ಮನವಿ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ತಗಾದೆ ತೆಗೆದ ಗ್ರಾಮದ ಮೂವರು ರಾಮಯ್ಯ ಹಾಗೂ ಮೇಘಾವರ್ಷ ಮೇಲೆ ಹಲ್ಲೆ ನಡೆಸಿದ್ದಾರೆ.

‘ಗ್ರಾಮದ ಮಂಜುನಾಥ್, ಭೈರಪ್ಪ ಹಾಗೂ ಸುಬ್ಬು ಎಂಬುವರು ರಾಮಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಜುನಾಥ್‌ನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಯ್ಯ ಅವರ ಕಣ್ಣಿಗೆ ಗಾಯವಾಗಿದ್ದು, ಮೊದಲು ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ, ಬಳಿಕ ನೇತ್ರದೀಪ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದರು.

ಆಸ್ಪತ್ರೆಗೆ ಎಸ್ಪಿ ನಾರಾಯಣ ಭೇಟಿ ನೀಡಿದ್ದರು.

ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋರಾಟಗಾರ ರಾಮಯ್ಯ ಅವರು ಪಾಪರಾಜನಹಳ್ಳಿ ಸಮೀಪದ ‘ಬುಡ್ಡಿದೀಪ’ ನಿವಾಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.