ಬಂಗಾರಪೇಟೆ: ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ರಸ್ತೆ ಇಲ್ಲದೆ ರೈಲ್ವೆ ಹಳಿ ದಾಟಿಕೊಂಡು ಹೋಗುವ ಸ್ಥಿತಿ ಇದೆ. ಇದಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡಿಕೊಡಲು ಸಂಸದ ಎಂ.ಮಲ್ಲೇಶಬಾಬು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದರು.

ತಾಲ್ಲೂಕಿನ ಬೀರಂಡಹಳ್ಳಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳೆದ ವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿದಾಗ ರಸ್ತೆ ಇಲ್ಲದ ಕಾರಣ ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಾಯಿತು. ಇದರಿಂದ ವಿಚಲಿತರಾದ ಜಿಲ್ಲಾಧಿಕಾರಿ ಕೂಡಲೇ ಸ್ಥಳ ಪರಿಶೀಲನೆ ಮಾಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿ ಎಂದು ತಹಶೀಲ್ದಾರ್ ವೆಂಕಟೇಶಪ್ಪ ಅವರಿಗೆ ಸೂಚಿಸಿದ್ದರು.

ನಿರಾಶ್ರಿತರ ಕೇಂದ್ರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳವಿಲ್ಲದ ಕಾರಣ ಪಕ್ಕದಲ್ಲೇ ಇರುವ ಖಾಸಗಿ ಜಮೀನಿನ ಮಾಲೀಕ ಇಂದರ್ ಸೇಠ್ ಎಂಬುವರನ್ನು ಸಂಪರ್ಕಿಸಿ ನಿರಾಶ್ರಿತರ ಕೇಂದ್ರಕ್ಕೆ ರಸ್ತೆ ನಿರ್ಮಾಣ ಮಾಡಲು 10 ಅಡಿ ಬಿಟ್ಟು ಕೊಡಲು ಚರ್ಚಿಸಿದಾಗ ಅವರು ಸಂಸದರ ಮನವಿಗೆ ಜಾಗ ನೀಡಲು ಸಮ್ಮತಿಸಿದರು. ಈಗಾಗಲೇ ಬೀರಂಡಹಳ್ಳಿ ರೈಲ್ವೆ ಕೆಳ ಸೇತುವೆಯಿಂದ ಬಂದು ಖಾಸಗಿ ವ್ಯಕ್ತಿ ಇಂದರ್ ಸೇಠ್ ಅವರ ಜಮೀನು ಮೂಲಕ ನಿರಾಶ್ರಿತರ ಕೇಂದ್ರಕ್ಕೆ ಹೋಗಲು ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸಹ ತನ್ನ ಜಾಗ ನೀಡಲು ಸಮ್ಮತಿ ಸೂಚಿಸಿದರಿಂದ ಸಮಸ್ಯೆ ಯಾವುದೇ ಗಂಭೀರ ಹಂತಕ್ಕೆ ಹೋಗದೆ ಸುಲಭವಾಗಿ ಬಗೆಹರಿದಿದೆ ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದರು.

ಬೆಂಗಳೂರು–ಚೆನ್ನೈ ಕಾರಿಡಾರ್ ರಸ್ತೆಯಲ್ಲಿ ಬರುವ ಬಂಗಾರಪೇಟೆ ಹಾಗೂ ಕೋಲಾರ ವಾಹನ ಸವಾರರಿಗೆ ಬೀರಂಡಹಳ್ಳಿ ಗೇಟ್ ಬಳಿ ಹೊರ ಹೋಗಲು ಹಾಗೂ ರಸ್ತೆಗೆ ಸೇರಲು ಸಂಪರ್ಕವಿಲ್ಲದೆ ಕೆಜಿಎಫ್ನ ಕೃಷ್ಣಾವರಂ ಗ್ರಾಮದ ಬಳಿ ಮಾತ್ರ ಹೊರ ಬರಲು ಹೋಗಲು ಅವಕಾಶ ನೀಡಲಾಗಿದೆ. ಇದನ್ನು ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದು ಬೀರಂಡಹಳ್ಳಿ ಬಳಿ ರಸ್ತೆಗೆ ಸೇರಲು ಹಾಗೂ ಹೊರ ಬರಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸಮ್ಮತಿ ನೀಡಿದ್ದಾರೆ. ಅಂತಿಮವಾಗಿ ಕೇಂದ್ರ ಸಚಿವ ಗಡ್ಕರಿ ಜತೆ ಚರ್ಚಿಸಿ ಬಂಗಾರಪೇಟೆ ಜನರಿಗೆ ಈ ರಸ್ತೆಯಲ್ಲಿ ಸುಲಭ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಎಸ್.ವೆಂಕಟೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಪುರಸಭೆ ಸದಸ್ಯ ಸುನೀಲ್ ಕುಮಾರ್, ಮುಖಂಡರಾದ ಎಂ.ರಾಮಚಂದ್ರ, ಭೂ ಬ್ಯಾಂಕ್ನ ನಿರ್ದೇಶಕ ಬಾಲಕೃಷ್ಣ, ಮುನಿಯಪ್ಪ, ನಿಲಯ ಪಾಲಕರಾದ ಸುನೀತ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.