ಬೇತಮಂಗಲ: ಕೋಲಾರ ಜಿಲ್ಲೆಯಲ್ಲಿ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿರುವ ಬೇತಮಂಗಲದ ಪಾಲಾರ್ ನದಿಯು ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಶನಿವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಗ್ರಾಮದ ಪಾಲಾರ್ ನದಿ ದಡದಲ್ಲಿ ನೆಲೆಸಿರುವ ವಿಜೇಂದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಪಾಲಾರ್ ನದಿ ದಡದಲ್ಲಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು.

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಪುರಾತನ ಕಾಲದ ಸಾವಿರಾರು ಎಕರೆ ವಿಸ್ತೀರ್ಣವುಳ್ಳ ಪಾಲಾರ್ ನದಿಯು ತುಂಬಿಕೋಡಿ ಹರಿಯುತ್ತಿರುವುದು ನೋಡುವುದಕ್ಕೆ ಕಣ್ಣಿಗೆ ಸೊಗಸಾಗಿ ಕಾಣುತ್ತಿದೆ ಎಂದರು.

ಬೇತಮಂಗಲ ಪಾಲಾರ್ ನದಿಯು ತುಂಬಿಕೊಂಡಿರುವುದರಿಂದ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಬೇತಮಂಗಲ ಸೇರಿ ಕೆಜಿಎಫ್ ಹಾಗೂ ಇತರೆ ಕಡೆಗಳಿಂದ ಜನರು ಕೋಡಿಯನ್ನು ನೋಡಲು ತೆರಳಿ ಬರುತ್ತಿದ್ದಾರೆ.

ಕೆರೆ ನೋಡಲು ವಿವಿಧ ಕಡೆಯಿಂದ ಬರುವ ಸಾರ್ವಜನಿಕರು ದೂರದಿಂದ ನೋಡಿ ಆನಂದಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನಾರಾಯಣ್, ಇಒ ವೆಂಕಟೇಶ್, ರಂಗಶಾಮಯ್ಯ, ವಿನೂ ಕಾರ್ತಿಕ್, ಅಯ್ಯಪಲ್ಲಿ ಮಂಜುನಾಥ್, ಹಂಗಳ ರಮೇಶ್, ಎಂ.ಸಿ.ಚಂದ್ರಪ್ಪ, ವಸಂತ್ ಕುಮಾರ್, ನಾಗರಾಜ್, ಸುರೇಂದ್ರಗೌಡ, ರಾಮಚಂದ್ರಪ್ಪ, ನಲ್ಲೂರು ಶಂಕರ್, ವಿಜೇಂದ್ರ, ರಾಮಕೃಷ್ಣ ರೆಡ್ಡಿ, ಚಂದ್ರ ಕಾಂತ್, ಭಾರ್ಗವ್ ರಾಮ್, ರಾಮಕೃಷ್ಣಪ್ಪ, ಎಂಬಿಎ ಕೃಷ್ಣಪ್ಪ, ಕಾರಿ ಪ್ರಸನ್ನ, ಕೆ.ಎಂ.ಕೃಷ್ಣ ಮೂರ್ತಿ, ಮುನೇಗೌಡ, ರಾಜಣ್ಣ, ವಿಶ್ವನಾಥ್, ನಾರಾಯಣ ಸ್ವಾಮಿ, ವೇಣುಗೋಪಾಲ, ವೆಂಕಟೇಶ್, ಪಾಪಣ್ಣ, ಶಿವ, ಬ್ಯಾಟೇಗೌಡ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.