ಕಲ್ಲು ಕುಟುಕರಿಗೆ ಸದ್ಯದಲ್ಲೇ ಅನುಮತಿ
ಜಿಲ್ಲೆಯಲ್ಲಿ ಕಲ್ಲು ಕುಟುಕರಿಂದ ನೂರಾರು ಅರ್ಜಿಗಳು ಬಂದಿವೆ. ಭೋವಿಗಳು ಅಲ್ಲದೇ ಬೇರೆ ಸಮುದಾಯದವರೂ ಇದ್ದಾರೆ. ಸದ್ಯದಲ್ಲೇ ಸಭೆ ನಡೆಸಿ ಅಂತಿಮ ಅನುಮೋದನೆ ನೀಡಲಾಗುವುದು. ನಿಯಮ ಪ್ರಕಾರವೇ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು. ನಿಗಮದ ಅಧ್ಯಕ್ಷ ರಾಮಪ್ಪ ಮಾತನಾಡಿ ತಾಂತ್ರಿಕ ಸಮಸ್ಯೆ ಇದ್ದು ಅದನ್ನು ಬಗೆಹರಿಸಿ ಈ ತಿಂಗಳಾಂತ್ಯದಲ್ಲಿ ಅನುಮತಿ ಕೊಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.