ಕೋಲಾರ: ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಿರುವ ವೇಮಗಲ್–ಕುರುಗಲ್ಗೆ ಇದೇ ಮೊದಲ ಬಾರಿ ಚುನಾವಣೆ ನಡೆಯುತ್ತಿದ್ದು, ಮೈತ್ರಿಕೂಟದಿಂದ ಟಿಕೆಟ್ ಹಂಚಿಕೆಯ ಹಗ್ಗಜಗ್ಗಾಟದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಹಟ ಹಿಡಿದು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದ ಜೆಡಿಎಸ್ ಪಕ್ಷಕ್ಕೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 8 ಸ್ಥಾನ ಲಭಿಸಿದರೆ, ಬಿಜೆಪಿಗೆ 9 ಸ್ಥಾನ ಲಭಿಸಿವೆ. ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 17 ವಾರ್ಡ್ಗಳಿದ್ದು, ಆ.17ರಂದು ಚುನಾವಣೆ ನಡೆಯತ್ತಿದೆ.

ನಾಲ್ಕೈದು ದಿನಗಳಿಂದ ಜೆಡಿಎಸ್–ಬಿಜೆಪಿ ಮೈತ್ರಿ ಮುಖಂಡರು ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚೆಯಲ್ಲಿ ತೊಡಗಿದ್ದರು. ಭಾನುವಾರ ನಗರದ ಪಿ.ಸಿ ಬಡಾವಣೆಯಲ್ಲಿರುವ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರ ನಿವಾಸದ ಕಚೇರಿಯಲ್ಲಿ ಸುದೀರ್ಘ ಸಭೆ ನಡೆಯಿತು.

ಈ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಸಂಸದ ಎಂ.ಮಲ್ಲೇಶ್ ಬಾಬು (ಜೆಡಿಎಸ್), ಮಾಜಿ ಸಂಸದ ಎಸ್.ಮುನಿಸ್ವಾಮಿ (ಬಿಜೆಪಿ), ಮಾಜಿ ಸಚಿವ ವರ್ತೂರು ಪ್ರಕಾಶ್ (ಬಿಜೆಪಿ), ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜೆಡಿಎಸ್ನ ಸಿಎಂಆರ್ ಶ್ರೀನಾಥ್, ಬಿಜೆಪಿ ಮಾಜಿ ಶಾಸಕರಾದ ಕೆ.ಎಸ್.ಮಂಜುನಾಥ್ ಗೌಡ (ಮಾಲೂರು), ಬಿ.ಪಿ.ವೆಂಕಟಮುನಿಯಪ್ಪ (ಬಂಗಾರಪೇಟೆ) ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಉಭಯ ಪಕ್ಷಗಳ ಮುಖಂಡರು ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟರು. ಆ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂದು ದಳ ಮುಖಂಡರು ಸಮರ್ಥಿಸಿಕೊಂಡರು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಆ ಭಾಗದ ಕೆಲವೆಡೆ ಮುನ್ನಡೆ ಹೊಂದಿತ್ತು ಎಂಬುದಾಗಿ ಬಿಜೆಪಿ ಮುಖಂಡರು ವಾದ ಮಂಡಿಸಿದರು. ತಮ್ಮ ವಶದಲ್ಲಿದ್ದ ಲೋಕಸಭಾ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದನ್ನು ನೆನಪಿಸಿದರು.

ಪ್ರಮುಖವಾಗಿ ಸಿಎಂಆರ್ ಶ್ರೀನಾಥ್ ಹಾಗೂ ವರ್ತೂರು ಪ್ರಕಾಶ್ ತಮ್ಮ ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನದ ಬೇಡಿಕೆ ಇಟ್ಟರು. ಗೆಲುವಿನ ಅವಕಾಶಗಳ ಬಗ್ಗೆ ವಿವರಿಸಿದರು. ವಿಧಾನಸಭೆ ಚುನಾವಣೆ ವೇಳೆ ಈ ಇಬ್ಬರೂ ಮುಖಂಡರು ಈ ಭಾಗದಲ್ಲಿ ಹೆಚ್ಚಿನ ಓಡಾಟ ನಡೆಸಿದ್ದರು. ಹೀಗಾಗಿ, ಸಹಜವಾಗಿ ಹಕ್ಕೊತ್ತಾಯ ಮಂಡಿಸಿದರು. ಕೊನೆಯಲ್ಲಿ ಬಿಜೆಪಿಯದ್ದೇ ಮೇಲುಗೈ ಆಯಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರ ಮುಖ ತುಸು ಕಳೆಗುಂದಿದ್ದು ಸ್ಪಷ್ಟವಾಗಿತ್ತು, ಬಿಜೆಪಿ ಮುಖಂಡರು ಖುಷಿಯಲ್ಲಿದ್ದರು.

ಬಿಜೆಪಿಗೆ ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಲಭಿಸಿತು. ಮೂರು ಸಾಮಾನ್ಯ ಕ್ಷೇತ್ರಗಳಲ್ಲಿ, ಪರಿಶಿಷ್ಟ ಜಾತಿಯ ಎರಡು ಕ್ಷೇತ್ರ ಹಾಗೂ ಪರಿಶಿಷ್ಟ ಪಂಗಡ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಿತು. ಈ ಪೈಕಿ ಐದು ಮಹಿಳಾ ಮೀಸಲು ಕ್ಷೇತ್ರವೂ ಇವೆ.

ಜೆಡಿಎಸ್ಗೆ ಆರು ಸಾಮಾನ್ಯ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿತು. ಪರಿಶಿಷ್ಟ ಜಾತಿಯ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಲಭಿಸಿತು. ಈ ಪೈಕಿ ಕೇವಲ ಎರಡು ಮಹಿಳಾ ಮೀಸಲು ಕ್ಷೇತ್ರ ಸೇರಿವೆ.

ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆಯೂ ಹೆಚ್ಚು ಹೊತ್ತು ಚರ್ಚೆ ನಡೆದು ಕೊನೆಗೆ ಅಳೆದು ತೂಗಿ ಟಿಕೆಟ್ ಘೋಷಿಸಿದ್ದಾರೆ.

‘ಪ್ರತಿ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದ ಕಾರಣ ಸಭೆ ದೀರ್ಘ ಸಮಯ ಹಿಡಿಯಿತು. ಎರಡೂ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಮನವೊಲಿಸಿ ಟಿಕೆಟ್ ಘೋಷಿಸಲಾಗಿದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಸಭೆ ಬಳಿಕ ತಿಳಿಸಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಬೆಂಬಲಿಗ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಜೆಡಿಎಸ್ ಸೇರಿ ಆ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಕೊನೆಗೆ ಬಿಜೆಪಿಯಿಂದಲೇ ಟಿಕೆಟ್ ಸಿಕ್ಕಿದೆ. ಅವರು ಸುಳಿದೇನಹಳ್ಳಿ ವಿಶ್ವನಗರ ಆರನೇ ವಾರ್ಡ್ನಿಂದ ಕಣಕ್ಕಿಳಿಯುತ್ತಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಒಂದೊಂದು ವಾರ್ಡ್ನಲ್ಲಿ ಮೂರ್ನಾಲ್ಕು ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಾರಣ ಅವರ ಮನವೊಲಿಸಬೇಕಾಯಿತು

ಓಂಶಕ್ತಿ ಚಲಪತಿ ಜಿಲ್ಲಾ ಬಿಜೆಪಿ ಅಧ್ಯಕ್ಷ

ವೇಮಗಲ್–ಕುರುಗಲ್ ಪ.ಪಂ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ

ಎಂ.ಮಲ್ಲೇಶ್ ಬಾಬು ಸಂಸದ ಜೆಡಿಎಸ್ ಮುಖಂಡ

ನಾಮಪತ್ರ ಸಲ್ಲಿಕೆ: ನಾಳೆಯೇ ಕೊನೆ

ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.5 (ಮಂಗಳವಾರ) ಕೊನೆಯ ದಿನವಾಗಿದೆ. ಆ.6 (ಬುಧವಾರ) ನಾಮಪತ್ರ ಪರಿಶೀಲನೆ ನಡೆಯಲಿದೆ. ಆ.8 (ಶುಕ್ರವಾರ) ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಆ.17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಆ.20ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರದಲ್ಲಿ ನಡೆಯಲಿದೆ.

ಯಾರಿಗೆ ಕಾಯುತ್ತಿದೆ ಕಾಂಗ್ರೆಸ್?

ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಳ್ಳಲು ಕೇವಲ ಎರಡು ದಿನ ಬಾಕಿ ಇದ್ದು ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಆ ಪಕ್ಷದ ಮುಖಂಡರು ಕಾದು ನೋಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಈಗಾಗಲೇ ಹೈಕಮಾಂಡ್ನಿಂದ ಬಿ ಫಾರಂ ಬಂದಿದೆ. 17 ವಾರ್ಡ್ಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. 10 ಕ್ಷೇತ್ರಗಳಲ್ಲಿ ಅಂತಿಮ ಪಟ್ಟಿ ಸಿದ್ಧವಾಗಿದ್ದರೂ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ‘ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ನಾವು ಯಾರನ್ನು ಘೋಷಣೆ ಮಾಡುತ್ತೇವೆ ಎಂಬುದನ್ನು ಕಾಯುತ್ತಿದ್ದಾರೆ. ನಮ್ಮಲ್ಲಿ ಟಿಕೆಟ್ ಸಿಗದವರನ್ನು ಸೆಳೆದುಕೊಂಡು ಅಭ್ಯರ್ಥಿ ಮಾಡುವ ಆಲೋಚನೆಯಲ್ಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಟೀಕಿಸಿದರು.

ಟಿಕೆಟ್ ಕೈತಪ್ಪಿದವರ ಬೇಸರ

ಇನ್ನು ಟಿಕೆಟ್ ಬೇಡಿಕೆ ಇಟ್ಟು ಕೈತಪ್ಪಿದ ಜೆಡಿಎಸ್ ಆಕಾಂಕ್ಷಿಗಳು ಸಹಜವಾಗಿಯೇ ಬೇಸರದಲ್ಲಿದ್ದರು. ಕೆಲವರು ವರ್ತೂರು ಪ್ರಕಾಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಚೆಗೆ ನಡೆದ ಕೋಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ವೇಮಗಲ್ ಕ್ಷೇತ್ರದಲ್ಲಿ ಮೈತ್ರಿಕೂಟಕ್ಕೆ ಎದುರಾದ ಸೋಲನ್ನು ನೆನಪಿಸಿದ್ದಾರೆ. ಬಿಜೆಪಿಗೆ ಹೆಚ್ಚು ಸ್ಥಾನ ಬಿಟ್ಟುಕೊಟ್ಟಿರುವುದಕ್ಕೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಘೋಷಣೆಗೆ ಮುನ್ನವೂ ವೇಮಗಲ್ ಭಾಗದ ಕೆಲ ಮುಖಂಡರು ಬೇಸರ ಹೊರ ಹಾಕಿದ್ದರು. ಹೀಗಾಗಿ ಚುನಾವಣೆ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.