ಕೆಜಿಎಫ್: ಬೆಮಲ್ ನಗರದಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಬಸ್ ಬುಧವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.

ತಾವರೆಕೆರೆ ಬಳಿ ಇರುವ ವೋಲ್ವೊ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ನಸುಕಿನ 4.30ರ ಸುಮಾರಿಗೆ ಬೆಮಲ್ ನಗರದ ಆಫಿಸರ್ಸ್ ಕ್ವಾಟರ್ಸ್ ಬಳಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಶ್ರೀರಾಮ ನಗರದ ಅರುಣ್ ಕುಮಾರ್, ವೆಸ್ಲಿನ್ ಬ್ಲಾಕ್ ನಿವಾಸಿ ಅರುಳ್ ಮುರುಗನ್, ಊರಿಗಾಂ ಪೇಟೆಯ ಸಂಜಯ್, ಕೆನಡೀಸ್ ಲೈನಿನ ನಿವಾಸಿ ವಿಜಯ ಮತ್ತು ಅರವಿಂದ, ಟ್ಯಾಂಕ್ ಬ್ಲಾಕ್ ನಿವಾಸಿ ಪಿ.ಅರುಣ್ಕುಮಾರ್ ಮತ್ತು ನ್ಯೂಮಿಲ್ ಬ್ಲಾಕ್ ನಿವಾಸಿ ವಿನೀತ್ ಗಾಯಗೊಂಡಿವವರು.

ಅವರನ್ನು ರಾಬರ್ಟ್ಸನ್ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಅರುಣ್ಕುಮಾರ್ ನೀಡಿದ ದೂರಿನ ಅನ್ವಯ ಬಸ್ ಚಾಲಕನ ವಿರುದ್ಧ ಬೆಮಲ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.