ವೇಮಗಲ್: ಸರ್ಕಾರಿ ಶಾಲೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೇಂದ್ರಗಳಿದ್ದಂತೆ. ಭವಿಷ್ಯದ ಸಮುದಾಯವನ್ನು ಸರಿದಾರಿಗೆ ತರುವ ಸಾಂಸ್ಕೃತಿಕ ಗುಡಿಗಳಿದ್ದಂತೆ. ಇವು ಕೇವಲ ವಿದ್ಯಾ ದೇಗುಲಗಳಲ್ಲ. ಭವಿಷ್ಯದ ಸಾಮಾಜಿಕ ಸ್ಥಿತಿ ರೂಪಿಸುವ ತಾಣಗಳಾಗಿವೆ ಎಂದು ಬಿಇಒ ಮಧುಮಾಲತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಕುರುಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೂಲಿಬೆಲೆ ಲಕ್ಕಿ ಆರ್ಟ್ಸ್ ಮಾಲೀಕರಾದ ನಯಜ್ ಖಾನ್ ಅವರಿಂದ ಶಾಲೆಗೆ ಕೊಡುಗೆಯಾಗಿ ನೀಡಿದ ಸಿಸಿಟಿವಿ ಕ್ಯಾಮೆರಾವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕುರುಗಲ್ ಸರ್ಕಾರಿ ಶಾಲೆಯನ್ನು ತಾಲ್ಲೂಕಿನಲ್ಲಿ ಉತ್ತಮ ಶಾಲೆಯಾಗಿ ಮಾರ್ಪಾಡು ಮಾಡಿರುವ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಂ ಚೌಡೇಗೌಡ ಅವರನ್ನು ಅಭಿನಂದಿಸಲಾಯಿತು.

ಚೌಡೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆ ಅಭಿವೃದ್ಧಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಸಂವಿಧಾನ ಜಾರಿಗೆ ಬಂದ ನಂತರ ಉಚಿತ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಎಲ್ಲರಿಗೂ ಶಿಕ್ಷಣ ಕಡ್ಡಾಯವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಕ್ಕಳು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಣ ತಜ್ಞ ದೇವಿದಾಸ್ ಸೇಟ್, ಬಿಆರ್ಪಿ ಮಲ್ಲಿಕಾರ್ಜುನಯ್ಯ, ಸಿಆರ್ಪಿ ವೆಂಕಟಾಚಲಪತಿ, ನಿವೃತ್ತ ಶಿಕ್ಷಕ ಬನಳಪ್ಪ, ಸೂಲಿಬೆಲೆ ಗೋಪಿನಾಥ್, ಮಂಜುನಾಥ್, ಟೈಲರ್ ಮಂಜುನಾಥ್, ಕಾಂತರಾಜ್, ಮಂಡಲ್ ಬಾಬು, ಮುರಳಿ, ಮುಖ್ಯ ಶಿಕ್ಷಕ ಮಹೇಶ್, ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.