ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾಗಾಂಧಿ ವಿ.ವಿ ಕೋರ್ಸ್‌ ಆರಂಭ

Last Updated 18 ಜುಲೈ 2019, 6:04 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಸರ್ಕಾರಿ ಪ್ರಥಮ ದರ್ಜೆ ಬಾಲಕರ ಪದವಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿವಿಧ ಸ್ನಾತಕೋತ್ತರ ಪದವಿ ತರಗತಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ ಆರಂಭಿಸಲಾಗುತ್ತದೆ’ ಎಂದು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಜಿ.ಎಚ್.ಇಬ್ರಾಹಿಂ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ವರ್ಷದಿಂದಲೇ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಗೆ ಶೈಕ್ಷಣಿಕವಾಗಿ ಹೆಚ್ಚಿನ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಜಿಲ್ಲೆಗೆ ವರದಾನವಾಗಲಿದೆ. ವಿ.ವಿಯು ರಾಜ್ಯದ ಯಾವ ಜಿಲ್ಲೆಗಳಲ್ಲೂ ಈ ಸೌಲಭ್ಯ ಕಲ್‍ಪಿಸಿಲ್ಲ. ವಿ.ವಿಯು ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದ್ದು, 32 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯುಜಿಸಿ ಮಾನ್ಯತೆ ಸಹ ಪಡೆದಿದೆ’ ಎಂದು ವಿವರಿಸಿದರು.

‘ದೇಶ ಅಭಿವೃದ್ಧಿಯಾಗಲು ಪ್ರತಿಯೊಬ್ಬರೂ ಸಾಕ್ಷರರಾಗಬೇಕು. ಸರ್ಕಾರದ ಒತ್ತಾಯದ ಮೇರೆಗೆ ಉದ್ಯೋಗ ಸೃಷ್ಟಿಸುವಂತಹ ವಿವಿಧ ಸರ್ಟಿಫಿಕೇಟ್ ಕೋರ್ಸ್‌ ಪರಿಚಯಿಸಲಾಗಿದೆ. ಜಿಎಸ್‌ಟಿ, ಯೋಗ ಶಿಕ್ಷಣ, ಪರಿಸರ ವಾತಾವರಣ ಬದಲಾವಣೆ, ಪರ್ಷಿಯನ್‌ ಭಾಷೆ ಸೇರಿದಂತೆ 6 ತಿಂಗಳ ನಾಲ್ಕು ಕೋರ್ಸ್‌ಗಳಿವೆ’ ಎಂದು ಮಾಹಿತಿ ನೀಡಿದರು.

‘ರೋಗಿಗಳು ಮತ್ತು ಅಂಗನವಾಡಿ ಮಕ್ಕಳ ಆರೈಕೆ, ಮಾಹಿತಿ ತಂತ್ರಜ್ಞಾನ, ಪತ್ರಿಕೋದ್ಯಮ ವಿಷಯ ಸಂಬಂಧ ವಾರದ ಕೊನೆಯ 2 ದಿನ ತರಗತಿ ತೆಗೆದುಕೊಳ್ಳಲಾಗುವುದು. ಇಂಗ್ಲೀಷ್ ಭಾಷೆ ಕಲಿಸಲು ಹೆಚ್ಚಿನ ಒತ್ತು ಕೊಡುತ್ತೇವೆ. 18 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯವರು ಕೋರ್ಸ್‌ಗೆ ಪ್ರವೇಶ ಪಡೆಯಬಹುದು’ ಎಂದು ಹೇಳಿದರು.

‘ಪರಿಶಿಷ್ಟ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶುಲ್ಕವನ್ನು ವಕ್ಫ್‌ ಮಂಡಳಿ ಪಾವತಿಸುತ್ತದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಲವು ರಿಯಾಯಿತಿ ಕಲ್ಪಿಸಲಾಗಿದೆ. ಜತೆಗೆ ಆರ್ಹರಿಗೆ ವಿದ್ಯಾರ್ಥಿವೇತನ ಸಿಗಲಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದರು.

ವಿ.ವಿ ನಿರ್ದೇಶಕಿ ಎಚ್.ರಾಧಾ, ಸಂಯೋಜಕ ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT