ಶನಿವಾರ, ಆಗಸ್ಟ್ 20, 2022
22 °C

ವೈಷಮ್ಯ; ಟೊಮೆಟೊ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನ ಯಳೇಸಂದ್ರ ಗ್ರಾಮದ ಅರ್ಜುನಪ್ಪ ಎಂಬುವರ ಟೊಮೆಟೊ ತೋಟಕ್ಕೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿದ್ದು, ತೋಟ ಸಂಪೂರ್ಣ ನಾಶವಾಗಿದೆ.

ಹಳೆ ವೈಷಮ್ಯದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಅರ್ಜುನಪ್ಪ ಎರಡು ಎಕರೆ ಜಮೀನಿನಲ್ಲಿ 10 ಸಾವಿರ ಟೊಮೆಟೊ ಸಸಿ ನಾಟಿ ಮಾಡಿದ್ದರು. ಇದಕ್ಕಾಗಿ ₹4 ಲಕ್ಷ ಖರ್ಚು ಮಾಡಿದ್ದರು. ಆದರೆ, ಫಸಲು ಬರುವ ಹಂತದಲ್ಲಿ ಕಿಡಿಗೇಡಿಗಳು ಬೆಳೆ ನಾಶಮಾಡಿದ್ದಾರೆ.

ಪ್ರಸ್ತುತ ಟೊಮೆಟೊ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ದುಪ್ಪಟ್ಟು ಬೆಲೆ ಸಿಗುವ ನಿರೀಕ್ಷೆಯಿತ್ತು. ಘಟನೆಯಿಂದ ಆತಂಕಕ್ಕೀಡಾಗಿರುವ ರೈತ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.