ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಕಾಂಗ್ರೆಸ್ ಮಡಿಲಿಗೆ ಆರು ಗ್ರಾ.ಪಂ

ಒಂದು ಪಂಚಾಯಿತಿಗೆ ಜೆಡಿಎಸ್‌ ತೃಪ್ತಿ
Last Updated 11 ಫೆಬ್ರುವರಿ 2021, 1:19 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ 6 ಗ್ರಾಮ ಪಂಚಾಯಿತಿಗಳ ಆಡಳಿತ ಕಾಂಗ್ರೆಸ್ ಮಡಿಲಿಗೆ ಬಿದ್ದಿದೆ. ಒಂದು ಗ್ರಾಮ ಪಂಚಾಯಿತಿ ಮಾತ್ರ ಜೆಡಿಎಸ್ ಪಾಲಾಗಿದೆ.

ಅಡ್ಡಗಲ್ ಗ್ರಾಮ ಪಂಚಾಯಿತಿಗೆ ಮುನಿಶಾಮಿ (ಅಧ್ಯಕ್ಷ), ಶೋಭಾ (ಉಪಾಧ್ಯಕ್ಷೆ), ಬೈರಗಾನಪಲ್ಲಿ ಗ್ರಾಮ ಪಂಚಾಯಿತಿಗೆ ಸುಮಾ (ಅಧ್ಯಕ್ಷೆ), ಚಿನ್ನವೆಂಕಟಸ್ವಾಮಿ (ಉಪಾಧ್ಯಕ್ಷ), ಜೆ. ತಿಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಚೌಡಮ್ಮ (ಅಧ್ಯಕ್ಷೆ), ಟಿ.ವಿ. ನಾಗೇಶ್‌ ರೆಡ್ಡಿ(ಉಪಾಧ್ಯಕ್ಷ), ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿಗೆ ವಿಶ್ವನಾಥರೆಡ್ಡಿ (ಅಧ್ಯಕ್ಷ), ವಿಜಯಲಕ್ಷ್ಮಿ (ಉಪಾಧ್ಯಕ್ಷೆ), ಕೋಡಿಪಲ್ಲಿ ಗ್ರಾಮ ಪಂಚಾಯಿತಿಗೆ ಶಿವಮ್ಮ (ಅಧ್ಯಕ್ಷೆ), ರೆಡ್ಡಮ್ಮ (ಉಪಾಧ್ಯಕ್ಷೆ), ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಗೆ ಬಿ.ಎಂ. ರವಿಕುಮಾರ್ (ಅಧ್ಯಕ್ಷ), ಭಾರತಿ (ಉಪಾಧ್ಯಕ್ಷೆ) ಹಾಗೂ ತಾಡಿಗೋಳ್ ಗ್ರಾಮ ಪಂಚಾಯಿತಿಗೆ ನಾಗರಾಜಪ್ಪ (ಅಧ್ಯಕ್ಷ) ಎನ್. ಸವಿತಾ (ಉಪಾಧ್ಯಕ್ಷೆ) ಆಯ್ಕೆಯಾಗಿದ್ದಾರೆ.

ಜೆ. ತಿಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚೌಡಮ್ಮ ಅವರನ್ನು ಅವಿರೋಧವಾಗಿ ಹಾಗೂ ಜೆಡಿಎಸ್ ಬೆಂಬಲಿತ ಟಿ.ವಿ. ನಾಗೇಶ್ ರೆಡ್ಡಿ ಅವರನ್ನು ಉಪಾಧ್ಯಕ್ಷರನ್ನಾಗಿ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಕೋಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬೈರಗಾನಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸುಮಾ ಅಧ್ಯಕ್ಷೆಯಾಗಿ ಮತ್ತು ಜೆಡಿಎಸ್ ಬೆಂಬಲಿತ ಚಿನ್ನವೆಂಕಟಸ್ವಾಮಿ ಉಪಾಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ.

ಚುನಾವಣೆ ನಡೆದ 7 ಗ್ರಾಮ ಪಂಚಾಯಿತಿಗಳ ಪೈಕಿ ತಾಡಿಗೋಳ್ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT