ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಮರಾಠ ಹೊಸಹಳ್ಳಿ ಕ್ರಾಸ್ ಸಮೀಪದ ಗುಟ್ಟಹಳ್ಳಿ ಬಳಿ ಸಿಡಿಲು ಬಡಿದು ಬುಧವಾರ ರಾತ್ರಿ ₹ 40 ಸಾವಿರ ಮೌಲ್ಯದ ಹಸುವೊಂದು ಮೃತಪಟ್ಟಿದೆ.

ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಈ ಹಸು ಸೇರಿದೆ. ಗ್ರಾಮ ಹೊವಲಯದಲ್ಲಿ ಮೂರು ಹಸುಗಳನ್ನು ಕಟ್ಟಿದ್ದು, ಸಿಡಿಲು ಬಡಿದ ಸಂದರ್ಭದಲ್ಲಿ ಒಂದು ಹಸು ಹಗ್ಗ ಕಿತ್ತುಕೊಂಡು ಹೊರಬಂದಿದೆ.

ಪಕ್ಕದಲ್ಲೇ ಇದ್ದ ಮತ್ತೊಂದು ಹಸುವಿಗೆ ಯಾವುದೇ ತೊಂದರೆ ಯಾಗಿಲ್ಲ ಎಂದು ಕೃಷ್ಣಪ್ಪ ಅವರ ಪುತ್ರ ಹರೀಶ್ ತಿಳಿಸಿದರು.

ಸಮೀಪದ ಚಿಕ್ಕಪುರ ಗ್ರಾಮದ ವ್ಯಾಪ್ತಿಯಲ್ಲಿ ಮಳೆ, ಗಾಳಿಗೆ ಭತ್ತದ ಫಸಲು ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.