ಸೋಮವಾರ, ಸೆಪ್ಟೆಂಬರ್ 27, 2021
22 °C

‌ವಿಜಯಪುರಕ್ಕೆ ನೇರ ಬಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ನಗರದಿಂದ ವಿಜಯಪುರಕ್ಕೆ ನೇರ ಬಸ್‌ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸೆ. 3ರಿಂದ ಪ್ರಾರಂಭಿಸಲಿದೆ.

ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ವಿಜಯಪುರ ಸೇವೆಯನ್ನು ಕೋವಿಡ್ ಕಾರಣದಿಂದಾಗಿ ನಿಲ್ಲಿಸ
ಲಾಗಿತ್ತು. ಬೆಮಲ್‌ ಉತ್ತರ ಕರ್ನಾಟಕ ಸಂಘವು ಪುನಃ ಬಸ್ ಸಂಚಾರ ಪ್ರಾರಂಭಿಸುವಂತೆ ಮನವಿ ಸಲ್ಲಿಸಿತ್ತು.

ಈ ಮನವಿ ಪುರಸ್ಕರಿಸಿರುವ ಅಧಿಕಾರಿಗಳು ಬಸ್ ಸೇವೆಯನ್ನು ಮತ್ತೆ ಆರಂಭಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕೆಜಿಎಫ್‌ ಬಿಡುವ ರಾಜ ಹಂಸ ಬಸ್‌ ಮುಂಜಾನೆ 5 ಗಂಟೆಗೆ ವಿಜಯಪುರಕ್ಕೆ ತಲುಪಲಿದೆ. ನಂತರ ಸಂಜೆ 5ಕ್ಕೆ ವಿಜಯಪುರ ಬಿಟ್ಟು ಬೆಳಿಗ್ಗೆ 7 ಗಂಟೆಗೆ ಕೆಜಿಎಫ್ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.