ಗುರುವಾರ , ಮೇ 26, 2022
23 °C

ಕೋಲಾರ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 14 ಮಂದಿಯನ್ನು 2021–22ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಿಂದ ಕೋಲಾರ ತಾಲ್ಲೂಕಿನ ನರಸಿಂಹಯ್ಯ, ಕುಲುಮೆ ವೃತ್ತಿಯಲ್ಲಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಶ್ರೀನಿವಾಸಾಚಾರಿ, ವೈದ್ಯಕೀಯ ಕ್ಷೇತ್ರದಲ್ಲಿ ಕೋಲಾರದ ವೈದ್ಯ ಡಾ.ಹರೀಶ್, ಸಾಹಿತ್ಯ ಕ್ಷೇತ್ರದಿಂದ ಶ್ರೀನಿವಾಸಪುರ ಸಾಹಿತಿ ಸ.ರಘುನಾಥ, ಸಂಗೀತ ಕ್ಷೇತ್ರದಿಂದ ಬಂಗಾರಪೇಟೆ ತಾಲ್ಲೂಕಿನ ಅಪ್ಪಿಗೆರೆ ಗ್ರಾಮದ ನಾದಸ್ವರ ಕಲಾವಿದ ವೆಂಕಟೇಶಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಿಂದ ಕೋಲಾರದ ಎಚ್.ಕೆ.ರಾಘವೇಂದ್ರ ಮತ್ತು ವಿಶ್ವ ಕುಂದಾಪುರ, ಶಿಲ್ಪಕಲೆ ಕ್ಷೇತ್ರದಿಂದ ಮಾಲೂರಿನ ಈಶ್ವರಾಚಾರ್ಯ, ಜನಪದ ಕ್ಷೇತ್ರದಿಂದ ಕೋಲಾರ ತಾಲ್ಲೂಕು ನರಸಾಪುರ ಗ್ರಾಮದ ಕಲಾವಿದ ಎಂ.ಕೃಷ್ಣಪ್ಪ, ಕನ್ನಡಪರ ಹೋರಾಟಗಾರರಾದ ಕೆಜಿಎಫ್‌ನ ಅಶೋಕ್‌ ಲೋಣಿ, ರಂಗಭೂಮಿ ಕ್ಷೇತ್ರದಿಂದ ಮುಳಬಾಗಿಲು ತಾಲ್ಲೂಕಿನ ಮೋತಕಪಲ್ಲಿಯ ರತ್ನಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡಪರ ಕಾಯಕಕ್ಕೆ ಕೋಲಾರದ ಸುಲೇಮಾನ್ ಖಾನ್, ಕೃಷಿ ಕ್ಷೇತ್ರದಿಂದ ಶ್ರೀನಿವಾಸಪುರದ ರೈತ ಮಹಿಳೆ ರತ್ನಮ್ಮ, ಯೋಗ ಮತ್ತು ಕಾನೂನು ಸೇವೆಯಲ್ಲಿ ಕೋಲಾರದ ಬಿಸಪ್ಪಗೌಡ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು