ಶುಕ್ರವಾರ, ಫೆಬ್ರವರಿ 28, 2020
19 °C

ಜ್ಞಾನ ವೃದ್ಧಿಯಿಂದ ಶೈಕ್ಷಣಿಕ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿದ್ಯಾರ್ಥಿಗಳು ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ತಾಲ್ಲೂಕಿನ ಹೊಳಲಿಯಲ್ಲಿ ಸುಗುಣ ಬಿಎಡ್ ಕಾಲೇಜು ವತಿಯಿಂದ ಬಿಎಡ್ ಪರೀಕ್ಷಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಸಾಮಾನ್ಯಜ್ಞಾನ ವೃದ್ಧಿಸಿಕೊಂಡರೆ ಶೈಕ್ಷಣಿಕ ಪ್ರಗತಿ ಸಹಕಾರಿಯಾಗುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು’ ಎಂದು ಹೇಳಿದರು.

‘ಜ್ಞಾನ ಹೆಚ್ಚಿಸುವ ಪುಸ್ತಕಗಳನ್ನು ಓದಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಕಲಿಕೆಯಿಂದ ಪದವಿ ಪಡೆಯಬಹುದು ಆದರೆ ಸಮಾಜದಲ್ಲಿ ಸೌಹಾರ್ದತೆಯಿಂದ ಬದುಕುವ ಕಲೆ ಕರಗತಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪ್ರಕಾಶ್ ಮಾತನಾಡಿ, ‘ಬಿಎಡ್ ಪದವೀಧರರು ಮುಂದೆ ಗುರುವಿನ ಸ್ಥಾನಕ್ಕೆ ಹೋಗುವವರು. ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬಿಎಡ್ ವಿದ್ಯಾರ್ಥಿಗಳು ಭಾವಿ ಶಿಕ್ಷಕರೂ ಆಗಿರುವುದರಿಂದ ಬದುಕಿನಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಿ. ಸಮಾಜ ನಮಗೇನು ನೀಡಿದೆ ಎಂಬುದರ ಜತೆಗೆ ಸಮಾಜಕ್ಕೆ ನಮ್ಮಿಂದ ಏನು ಪ್ರಯೋಜನೆ ಎಂಬ ಸತ್ಯ ಅರಿತು ಸಾರ್ಥಕ ಬದುಕು ಕಂಡುಕೊಳ್ಳಬೇಕು’ ಎಂದರು.

ಸುಗುಣ ನರ್ಸಿಂಗ್ ಹೋಂ ವೈದ್ಯ ಡಾ.ರಾಮಯ್ಯ, ಡಾ.ಕೆ.ರಮೇಶ್, ಪ್ರಾಂಶುಪಾಲ ಟಿ.ನಾಗರಾಜ್, ಸಹಾಯಕ ಪ್ರಾಧ್ಯಾಪಕರಾದ ಗಂಟಲಪ್ಪ, ಚೌಡರೆಡ್ಡಿ, ಅರುಣ, ಟಿ.ವಿ.ಪುಷ್ಪ, ಉಮಾಶಾಂತ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)