ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯ ಸ್ಥಾನ ಅಲಂಕರಿಸುವ ಮಹಿಳೆಯರೇ ಅಧಿಕಾರ ನಡೆಸಬೇಕು. ಮಹಿಳೆಯರ ಹೆಸರಿನಲ್ಲಿ ಅವರ ತಂದೆ, ಗಂಡ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರು ಅಧಿಕಾರ ಚಲಾಯಿಸಬಾರದು. ಅವರ ಪರವಾಗಿ ಯಾವುದೇ ಸಭೆ ಮತ್ತು ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂಬುದಾಗಿ ಪಂಚಾಯಿತಿ ಕಾಯ್ದೆಯ ಅಡಿ ಕಾನೂನು ಇದೆ. ಆದಾಗ್ಯೂ, ಹನುಮಪ್ಪ ತಮ್ಮ ಪತ್ನಿಯ ಅಧ್ಯಕ್ಷ ಗಾದಿಯಲ್ಲಿ ಕುಳಿತಂತೆ ಇರುವ ವಿಡಿಯೊ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.