ಕೋಲಾರ: ಅಬಕಾರಿ ಇಲಾಖೆಯು ಸನ್ನದುಗಳಿಗೆ ಪರವಾನಗಿ ನೀಡಲು ಇ-ಹರಾಜು ವ್ಯವಸ್ಥೆ ತಂದಿರುವುದು ಸಕಾರಾತ್ಮಕ ಸಂಗತಿ. ಇದು ಪಾರದರ್ಶಕ ಅನುಷ್ಠಾನಕ್ಕೆ ಒತ್ತು ನೀಡುವಂಥದ್ದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅಬಕಾರಿ ಇಲಾಖೆಯು ಬುಧವಾರ ಇ-ಹರಾಜು ಪ್ರಕ್ರಿಯೆ ಸಂಬಂಧ ಸಂಭಾವ್ಯ ಬಿಡ್ದಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಇ-ಹರಾಜು ಪ್ರಕ್ರಿಯೆಯು ಸರ್ಕಾರದ ಆದಾಯ ಹೆಚ್ಚಿಸುವುದು ಒಂದು ದೃಷ್ಟಿಯಾಗಿದ್ದರೂ ಆಡಳಿತದಲ್ಲಿ ಚುರುಕು ತರುವುದು, ಸಾರ್ವಜನಿಕರ ಹಿತ ಕಾಪಾಡುವುದು ಮುಖ್ಯವಾಗಿದೆ ಎಂದರು.

ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಪರವಾನಗಿಗಳ ಇ–ಹರಾಜಿಗೆ ಇಲಾಖೆ ಮುಂದಾಗಿದೆ. ಇದಕ್ಕೂ ಮೊದಲು ಪೂರ್ವಸಿದ್ಧತೆ ನಡೆಸಿರುವುದು ಶ್ಲಾಘನೀಯ. ಬಾಕಿ ಉಳಿದುಕೊಂಡಿದ್ದ 569 ಪರವಾನಗಿಗಳ ಇ–ಹರಾಜು ನಡೆಯಲಿದ್ದು, ಇದರಲ್ಲಿ 477 ಸಿಎಲ್2 (ಚಿಲ್ಲರೆ ಮದ್ಯದಂಗಡಿ) ಪರವಾನಗಿ ಮತ್ತು92 ಸಿಎಲ್9 (ಬಾರ್ ) ಪರವಾನಗಿಗಳು ಇವೆ. ಜಿಲ್ಲೆಗೆ ಸಂಬಂಧಿಸಿದಂತೆ ಕೋಲಾರದಲ್ಲಿ 15 ಹಾಗೂ ಚಿಕ್ಕಬಳ್ಳಾಪುರದಲ್ಲಿ 11 ಪರವಾನಗಿಗಳು ಇ–ಹರಾಜಿಗೆ ಇವೆ ಎಂದು ಅವರು ಮಾಹಿತಿ ನೀಡಿದರು.

ಇ-ಹರಾಜಿನ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೂ ಹೊಸದಾಗಿ ನೀಡುವ ಸಿಎಲ್2ಎ ಮತ್ತು ಸಿಎಲ್9ಎ ಪರವಾನಗಿಗಳಿಗೆ ಅಬಕಾರಿ ಕಾಯಿದೆಯ ಎಲ್ಲ ಹಳೆಯ ಮಾವಜೂದ್ಗಳು ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಹೆಚ್ಚುವರಿ ಅಬಕಾರಿ ಆಯುಕ್ತ ಬಸವರಾಜ್ ಆರ್.ಸೋಮಣ್ಣವರ್, ಅಬಕಾರಿ ಜಂಟಿ ಆಯುಕ್ತ ಗಿರಿ, ಕೋಲಾರ ಅಬಕಾರಿ ಉಪ ಆಯುಕ್ತೆ ಸೈಯದಾ ಅಜ್ಮತ್ ಆಫ್ರಿನ್, ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತ ಡಿ.ಪಿ.ನರೇಂದ್ರ ಕುಮಾರ್, ಅಧೀಕ್ಷಕ ಜೆ.ದೀಪಕ್, ಸಂಪನ್ಮೂಲ ವ್ಯಕ್ತಿಗಳಾದ ಎನ್.ನರೇಶ್, ರವೀಂದ್ರನಾಥ್, ಕೋಲಾರ, ಚಿಕ್ಕಬಳ್ಳಾಪುರ ಸನ್ನದುದಾರರು, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.