ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್‌

ಜನತಾ ದರ್ಶನದಲ್ಲಿ ಜಟಾಪಟಿ: ನಾರಾಯಣಸ್ವಾಮಿ ವಿರುದ್ಧವೂ ಪ್ರಕರಣ?
Published 29 ಸೆಪ್ಟೆಂಬರ್ 2023, 22:26 IST
Last Updated 29 ಸೆಪ್ಟೆಂಬರ್ 2023, 22:26 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಸೆ.25ರಂದು ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ನಡೆದ ಜಟಾಪಟಿ ಸಂಬಂಧ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೀಡಿದ ದೂರಿನ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

‘ಸಂಸದ ಮುನಿಸ್ವಾಮಿ ಕೂಡ ದೂರು ನೀಡಿದ್ದು, ಇದೇ ಠಾಣೆಯಲ್ಲಿ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ನಾರಾಣಸ್ವಾಮಿ ದೂರಿನಲ್ಲೇನಿದೆ: ‘ಜನತಾ ದರ್ಶನದಲ್ಲಿ ಮುನಿಸ್ವಾಮಿ ನನ್ನತ್ತ ಕೈ ತೋರಿಸಿ ಸಚಿವರನ್ನು ನೋಡುತ್ತಾ, ‘ಅಕ್ಕಪಕ್ಕದಲ್ಲಿ ಭೂಗಳ್ಳರನ್ನು ಕೂರಿಸಿಕೊಂಡು ನೀನೇನು ಮಾಡಲು ಸಾಧ್ಯ’ ಎಂದು ವ್ಯಂಗ್ಯವಾಗಿ ಮತ್ತು ದರ್ಪದಿಂದ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

‘ಆರೋಪ ಸಾಬೀತುಪಡಿಸಲು ಹೇಳಿದಾಗ, ‘ನಿನ್ನನ್ನು ಇವತ್ತು ಮುಗಿಸುತ್ತೇನೆ’ ಎಂದು ಆಕ್ರೋಶಭರಿತರಾಗಿ ಅಲ್ಲಿದ್ದ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಹೊಡೆಯಲು ಮುನ್ನುಗ್ಗಿರುತ್ತಾರೆ. ಆಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಆಗಬಹುದಾದ ಅನಾಹುತ ತಡೆದಿದ್ದಾರೆ. ಜಿಲ್ಲಾ ಸಚಿವರು ಎದ್ದು ನಿಂತು ಸಂಸದರಿಂದ ಆಗಬಹುದಾದ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿದ್ದಾರೆ. ಸಂಸದರು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆವೊಡ್ಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ನೇತೃತ್ವದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನತಾ ದರ್ಶನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT