ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಪಾಳುಬಿದ್ದ ಹಳ್ಳಿ ಸೊಗಡಿನ ಏಕೈಕ ಉದ್ಯಾನ

ಮಾಲೂರು ವೈಟ್‌ಗಾರ್ಡನ್‌ನಲ್ಲಿ ₹55ಲಕ್ಷ ವೆಚ್ಚದಲ್ಲಿ ನಿರ್ಮಾಣ l ರಕ್ಷಣೆ ಇಲ್ಲದೇ ಕಲಾಕೃತಿಗಳು ಹಾಳು
Published 29 ಏಪ್ರಿಲ್ 2024, 7:30 IST
Last Updated 29 ಏಪ್ರಿಲ್ 2024, 7:30 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ವೈಟ್‌ಗಾರ್ಡನ್ ಬಳಿಯ ಏಕೈಕ ಹಳ್ಳಿ ಸೊಗಡಿನ ಉದ್ಯಾನದಲ್ಲಿರುವ ಹಾಸು, ಕಲಾಕೃತಿಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದು, ನಿರ್ವಹಣೆ ಇಲ್ಲದೇ ಉದ್ಯಾನ ಸೊರಗಿದೆ.

ಪುರಸಭೆ ಅಂದಾಜಿನ ಪ್ರಕಾರ ಪಟ್ಟಣ ವ್ಯಾಪ್ತಿಯಲ್ಲಿ 10 ರಿಂದ 15 ಉದ್ಯಾನಗಳಿದೆ. ಅವುಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ನಿತ್ಯ ವಾಯುವಿಹಾರ ಮಾಡುವ ಜನರಿಗೆ ಸೂಕ್ತ ಸ್ಥಳ ಅವಕಾಶವಿಲ್ಲದ ಕಾರಣ ರಸ್ತೆಯಲ್ಲಿ ವಿಹಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ 16ನೇ ವಾರ್ಡ್‌ನ ವೈಟ್ ಗಾರ್ಡನ್ ಬಳಿಯಲ್ಲಿ 2018 ರಲ್ಲಿ ಉದ್ಯಾನ ಪುರಸಭೆ ಸುಮಾರು ₹55 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಅಗತ್ಯವಿರುವ ಆಟಿಕೆಗಳನ್ನು ಒಂದು ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ.

ಹಿರಿಯರಿಗೆ ವಾಕಿಂಗ್ ಪಾಥ್, ಯುವಕರಿಗೆ ಒಪನ್ ಜಿಮ್ ನಿರ್ಮಾಣ ಮಾಡಲಾಗಿದೆ. ಉದ್ಯಾನದ ಮುಂಭಾಗದಲ್ಲಿ ಹಳ್ಳಿ ಸೊಗಡಿನ ಗೊಂಬೆ, ಮಕ್ಕಳು ಆಟವಾಡುವ ಕಲಾಕೃತಿ, ಅಮ್ಮನೊಂದಿಗೆ ಮಗು ಇರುವ ಗೊಂಬೆಗಳನ್ನು ನಿರ್ಮಾಣ ಮಾಡಲಾಗಿತ್ತು. ಪುರಸಭೆ ನಿರ್ವಹಣೆ ಕೊರತೆಯಿಂದ ರಕ್ಷಣೆ ಇಲ್ಲದೇ ಕಿಡಿಗೇಡಿಗಳು ಗೊಂಬೆಗಳನ್ನು ಒಡೆದು ಉರುಳಿಸಿದ್ದಾರೆ.

ಹಾಳಾದ ಕಲಾಕೃತಿಗಳು

ಹಾಳಾದ ಕಲಾಕೃತಿಗಳು

ವ್ಯಾಯಾಮ ಮಾಡಲು ನಿರ್ಮಾಣ ಮಾಡಿರುವ ಕಬ್ಬಿಣದ ಉಪಕರಣಗಳ ಬಿಡಿ ಭಾಗಗಳನ್ನು ಕಿತ್ತು ಹಾಳುಗೆಡವಲಾಗಿದೆ.

60 ಸಾವಿರ ಜನಸಂಖ್ಯೆ ಇರುವ ಮಾಲೂರು ಪಟ್ಟಣದಲ್ಲಿ ವೈಟ್ ಗಾರ್ಡನ್ ಬಳಿಯ ಉದ್ಯಾನ ಹೊರತು ಬೇರೆ ಯಾವುದೇ ಉದ್ಯಾನ ಇಲ್ಲ. ಸ್ಥಳೀಯ ಶಾಸಕರು ಪಟ್ಟಣದ ಮಕ್ಕಳ ಹಾಗೂ ಹಿರಿಯ ನಾಗರಿಕರ ಒಳಿತಿಗಾಗಿ ಉತ್ತಮ ಉದ್ಯಾನ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಟಿ.ರಾಮಚಂದ್ರ ಕಿಡಿಕಾರಿದರು.

ಪಟ್ಟಣದ ಏಕೈಕ ಉದ್ಯಾನ ಅಭಿವೃದ್ಧಿಪಡಿಸಲು ಅನುದಾನ ಕೊರತೆ ಇದೆ. ಕೆಲವು ಬಿಲ್ಡರ್‌ಗಳನ್ನು ಸಂಪರ್ಕಿಸಲಾಗಿದೆ. ಅಲ್ಲದೆ, ಪುರಸಭೆ ವತಿಯಿಂದ ಅತಿ ಶೀಘ್ರವಾಗಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದಾರೆ.
ರಾಮಮೂರ್ತಿ, ಪಟ್ಟಣದ 16ನೇ ವಾರ್ಡ್‌ ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT