ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೀಲವಾರ ಗ್ರಾಮದ ಸರ್ಕಾರಿ ಗೋಮಾಳ 98ರ ಸರ್ವೆ ನಂಬರ್‌ನಲ್ಲಿ 650 ಎಕರೆ ಜಮೀನು ಇದ್ದು, ಅದನ್ನು ಆಂಧ್ರಪ್ರದೇಶದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಾಗವೇಣಿ ಮತ್ತು ಇತರ ಸಿಬ್ಬಂದಿಯೊಡನೆ ಸ್ಥಳ ಪರಿಶೀಲನೆ ನಡೆಸಲಾಗಿದೆ. 650 ಎಕರೆ ಜಮೀನು ಪೈಕಿ ಉಳುಮೆ ನಡೆಸುತ್ತಿರುವ ಅಧಿಕೃತ ಮತ್ತು ಅಧಿಕೃತ ಸ್ವಾಧೀನದಾರರ ಬಗ್ಗೆ ಮಾಹಿತಿ ಕಲೆ ಹಾಕಿ ನೀಡಬೇಕು ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.