ಸೋಮವಾರ, ಮೇ 23, 2022
30 °C

ಸಿ.ಟಿ ಸ್ಕ್ಯಾನ್‌ಗೆ ಹೆಚ್ಚು ದರ ವಸೂಲಿ: ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿರುವ ಸಂಬಂಧ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡವು ಜಿಲ್ಲಾ ಕೇಂದ್ರದ ಖಾಸಗಿ ಸಿ.ಟಿ ಸ್ಕ್ಯಾನ್‌ ಕೇಂದ್ರಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಾಜ್ಯ ಕ್ಷಕಿರಣ ವಿಕಿರಣ ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಡಾ.ಕೆ.ಎಸ್.ರಾಜೇಶ್, ಸೇವಾ ಎಂಜಿನಿಯರ್‌ ಶಿವಕುಮಾರ್, ರೇಡಿಯಾಲಜಿ ತಂತ್ರಜ್ಞ ಎಂ.ಆರ್.ರಾಮಚಂದ್ರಾರೆಡ್ಡಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ (ಪ್ರಭಾರ) ಡಾ.ಕಮಲಾ ಅವರನ್ನು ಒಳಗೊಂಡ ತಂಡವು ಹೆಚ್ಚಿನ ಹಣ ವಸೂಲಿ ಸಂಬಂಧ ಸಿ.ಟಿ ಸ್ಕ್ಯಾನ್‌ ಕೇಂದ್ರಗಳಲ್ಲಿ ಮಾಹಿತಿ ಕಲೆ ಹಾಕಿತು.

‘ಕೋವಿಡ್‌ ಪತ್ತೆ ಹಚ್ಚುವುದಕ್ಕೆ ಎಚ್‌ಆರ್‌ಸಿಟಿ ಮತ್ತು ಚೆಸ್ಟ್ ಎಕ್ಸ್‌ರೇ ಪರೀಕ್ಷೆಗಾಗಿ ಖಾಸಗಿ ಸಿ.ಟಿ ಸ್ಕ್ಯಾನ್ ಕೇಂದ್ರಗಳು ಸರ್ಕಾರ ನಿಗದಿಪಡಿಸಿದ ದರ ಪಡೆಯಬೇಕು. ಹೆಚ್ಚು ಹಣ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ ಮತ್ತು ಕೆಪಿಎಂಇ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡುತ್ತೇವೆ’ ಎಂದು ರಾಜೇಶ್ ಎಚ್ಚರಿಕೆ ನೀಡಿದರು.

‘ಕೋವಿಡ್ ಪತ್ತೆ ಹಚ್ಚಲು ಎಚ್ಆರ್‌ಸಿಟಿ ಪರೀಕ್ಷೆಗೆ ಸರ್ಕಾರ ಎಲ್ಲಾ ಶುಲ್ಕ ಸೇರಿದಂತೆ ಬಿಪಿಎಲ್ ಪಡಿತರ ಚೀಟಿದಾರರಿಗೆ ₹ 1,500 ಮತ್ತು ಇತರೆ ವರ್ಗದ ಜನರಿಗೆ ₹ 2,500, ಚೆಸ್ಟ್ ಎಕ್ಸ್‌ರೇಗೆ ₹ 250 ಮಾತ್ರ ಪಡೆಯುವಂತೆ ಆದೇಶಿಸಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು