ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಬೆನ್ನಲೇ ಕೋಲಾರ ಕಗ್ಗಂಟು!

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 4.71 ಲಕ್ಷ, ಬಿಜೆಪಿಗೆ 1.94 ಲಕ್ಷ ಮತ
Published 23 ಸೆಪ್ಟೆಂಬರ್ 2023, 7:43 IST
Last Updated 23 ಸೆಪ್ಟೆಂಬರ್ 2023, 7:43 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟ ಬೆನ್ನಲೇ ಕೋಲಾರ ಮೀಸಲು ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದ್ದು, ಎರಡೂ ಪಕ್ಷಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. 

ಜೆಡಿಎಸ್‌ ಪಕ್ಷವು ಮೇನಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿನ ತನ್ನ ಸಾಧನೆಯನ್ನು ಮುಂದಿಟ್ಟುಕೊಂಡು ಈ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವುದು ಗೊತ್ತಾಗಿದೆ. ಇತ್ತ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ.

ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ, ಕೋಲಾರ, ಮಾಲೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು (ಒಟ್ಟು 8) ಬರುತ್ತವೆ.

ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಟ್ಟಾರೆ ಎಂಟು ಕ್ಷೇತ್ರಗಳಿಂದ 4.71 ಲಕ್ಷ ಮತ ಪಡೆದಿದೆ. ಐದು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಒಟ್ಟು 5.80 ಲಕ್ಷ ಮತ ಗಳಿಸಿದೆ. ಐದು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಶೂನ್ಯ ಸಾಧನೆ ಮಾಡಿರುವ ಬಿಜೆಪಿ ಒಟ್ಟು 1.94 ಲಕ್ಷ ಮತ ಪಡೆದಿದೆ.

ಈ ಲೋಕಸಭಾ ಕ್ಷೇತ್ರವನ್ನು 2019ರಲ್ಲಿ ಬಿಜೆಪಿ ಮೊದಲ ಬಾರಿ ಗೆದ್ದಿತ್ತು. 2 ಲಕ್ಷಕ್ಕೂ ಅಧಿಕ ಮತಗಳಿಂದ ಸತತ ಏಳು ಬಾರಿ ಸಂಸದರಾಗಿದ್ದ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಆಗ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಆಗಲೂ ಬಿಜೆಪಿ ಒಂದೂ ಕ್ಷೇತ್ರವನ್ನು ಹೊಂದಿರಲಿಲ್ಲ.

‘ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ ಬಲಿಷ್ಠವಾಗಿದೆ. ಹಿಂದಿನ ಲೋಕಸಭೆ ಚುನಾವಣೆಗಳಲ್ಲೂ ಉತ್ತಮ ಸಾಧನೆ ಮಾಡಿದೆ. ಈಗ ನಮ್ಮ ಮೂರು ಶಾಸಕರು ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್‌ ಹಾಗೂ ಮಾಲೂರು ಹೊರತುಪಡಿಸಿ ಇನ್ನುಳಿದ ಕಡೆ ಎರಡನೇ ಸ್ಥಾನ ಪಡೆದಿದ್ದೇವೆ’ ಎನ್ನುತ್ತಾರೆ ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಇಂಚರ ‌ಗೋವಿಂದರಾಜು.

‘ಬಿಜೆಪಿ ಸ್ಪರ್ಧಿಸುವ ಕಡೆಯಲೆಲ್ಲಾ ನಾವು ನ್ಯಾಯಯುತವಾಗಿ ಕೆಲಸ ಮಾಡಿ ಆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ. 2019ರಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಏರ್ಪಟ್ಟಾಗಲೂ ನಾವು ನ್ಯಾಯಯುತವಾಗಿ ಕೆಲಸ ಮಾಡಿದ್ದೆವು. ಆದರೆ, ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಈಗ ಕಾಂಗ್ರೆಸ್‌ನಲ್ಲಿ ಸಚಿವರಾಗಿರುವವರು, ಶಾಸಕರಾಗಿರುವವರು ಆಗ ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ್ದರು’ ಎಂದರು. 

ಇತ್ತ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂಬುದಾಗಿ ಹಾಲಿ ಸಂಸದ ಎಸ್‌.ಮುನಿಸ್ವಾಮಿ ಹಲವು ಬಾರಿ ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ಮುನಿಸ್ವಾಮಿ ಒಟ್ಟು 7,07,930 ಮತ ಪಡೆದಿದ್ದರೆ, ಕೆ.ಎಚ್‌.ಮುನಿಯಪ್ಪ 4,98,259 ಮತ ಪಡೆದಿದ್ದರು.

ಈ ಬಾರಿಯೂ ಕಾಂಗ್ರೆಸ್‌ನಿಂದ ಸಚಿವ ಮುನಿಯಪ್ಪ ಅವರನ್ನು ಮತ್ತೆ ಕಣಕ್ಕಿಳಿಸಲು ಪ್ರಯತ್ನ ನಡೆದಿದೆ. ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಹೈಕಮಾಂಡ್‌ ಸೂಚಿಸಿದರೆ ಸ್ಪರ್ಧೆಗೆ ಬದ್ಧ ಎಂಬ ಸುಳಿವು ನೀಡಿದ್ದರು. 

ಲೋಕಸಭೆ ಚುನಾವಣೆ: ಕೋಲಾರ ಕ್ಷೇತ್ರದ ಟಿಕೆಟ್‌ ಯಾರಿಗೆ?; ಚರ್ಚೆ ಆರಂಭ 2019ರಲ್ಲಿ ಬಿಜೆಪಿ ವಶವಾಗಿದ್ದ ಮೀಸಲು ಕ್ಷೇತ್ರ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಯಿಂದಲೂ ಪ್ರಯತ್ನ

[object Object]
ಇಂಚರ ಗೋವಿಂದರಾಜು
ಕೋಲಾರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಕೇಳಿದ್ದೇವೆ. ಗೆಲುವಿಗೆ ನಮಗೆ ಅವಕಾಶ ಹೆಚ್ಚಿದೆ. ಹಿಂದಿನ ಚುನಾವಣೆಗಳಲ್ಲೂ ಫಲಿತಾಂಶ ನಮ್ಮ ಕಡೆ ಬಂದಿತ್ತು. ಜೊತೆಯಾಗಿ ಕೆಲಸ ಮಾಡುತ್ತೇವೆ
ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಜೆಡಿಎಸ್‌ ಕೋಲಾರ

ಕೋಲಾರ ಲೋಕಸಭೆ ‌ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳು ಪಡೆದ ಮತ ಕ್ಷೇತ್ರ; ಕಾಂಗ್ರೆಸ್‌; ಜೆಡಿಎಸ್‌; ಬಿಜೆಪಿ ‌ಶಿಡ್ಲಘಟ್ಟ; 36157; 68932; 15446 ಚಿಂತಾಮಣಿ; 97324; 68272; 21711 ಶ್ರೀನಿವಾಸಪುರ; 85020; 95463; 6644 ಮುಳಬಾಗಿಲು; 67986; 94254; 9163 ಕೆಜಿಎಫ್‌; 81569; 1360; 31102 ಬಂಗಾರಪೇಟೆ; 77292; 72581; 8972 ಕೋಲಾರ; 83990; 53229; 50914 ಮಾಲೂರು; 50955; 17627; 50707 ಒಟ್ಟು; 580292; 471718; 194659

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT