ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಡುವೆ ಜೆಡಿಎಸ್‌ನ ‘ಪಂಚರತ್ನ’ ಯಾತ್ರೆ ಶುರು

ದೇವೇಗೌಡರ ನೇತೃತ್ವದಲ್ಲಿ ಪೂಜೆ l ಮಳೆ ಕಾರಣ ವಾರದಮಟ್ಟಿಗೆ ಮುಂದಕ್ಕೆ
Last Updated 1 ನವೆಂಬರ್ 2022, 19:55 IST
ಅಕ್ಷರ ಗಾತ್ರ

ಮುಳಬಾಗಿಲು (ಕೋಲಾರ ಜಿಲ್ಲೆ): ಜೆಡಿಎಸ್‌ನ ಮಹತ್ವಾಕಾಂಕ್ಷೆಯ ‘ಪಂಚ ರತ್ನ’ ರಥಯಾತ್ರೆ ಹಾಗೂ ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡಮಂಗಳವಾರ ಭಾರಿ ಮಳೆಯ ನಡುವೆ ಕುರುಡು ಮಲೆಯ ಗಣಪತಿ ಸನ್ನಿಧಾನದಲ್ಲಿ ಅಧಿಕೃತ ಚಾಲನೆ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ಶಾಸಕರುಹಾಗೂ ಸಂಭಾವ್ಯ ಅಭ್ಯರ್ಥಿಗಳುಹೋಮ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಯಾತ್ರೆಗೆಂದು ವಿಶೇಷವಾಗಿ ಸಿದ್ಧ
ಪಡಿಸಿರುವ ವಾಹನಗಳಿಗೆ ಪೂಜೆ ಸಲ್ಲಿಸಿ ಗೌಡರು ಹಸಿರು ನಿಶಾನೆ ತೋರಿದರು. ಬಳಿಕ ಆಂಜನೇಯ ದೇಗುಲ, ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರು.

ಕೆಸರು ಗದ್ದೆಯಾದ ಮೈದಾನ, ರದ್ದಾದ ಸಮಾವೇಶ: ಮಧ್ಯಾಹ್ನ ಆಯೋಜಿಸಿದ್ದ ಸಮಾವೇಶ ಮಳೆ ಕಾರಣ ರದ್ದಾಯಿತು. ನಗರದ 32 ಎಕರೆ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆ ಜಿಲ್ಲೆ ಗಳಿಂದ ಜನರನ್ನು ಕರೆತರಲು ಸಾವಿರಕ್ಕೂ ಅಧಿಕ ಬಸ್ ವ್ಯವಸ್ಥೆ ಮಾಡ ಲಾಗಿತ್ತು. ಈ ಪ್ರದೇಶ ಕೆಸರು ಗದ್ದೆಯಂತಾಗಿತ್ತು. ಜನರು ಫ್ಲೆಕ್ಸ್‌ ಹಾಗೂ ಬ್ಯಾನರ್‌ ಕಿತ್ತು ತಲೆಮೇಲೆ ಇಟ್ಟುಕೊಂಡು ಮಳೆಯಿಂದ ರಕ್ಷಿಸಿಕೊಂಡರು.

ಮೊದಲ ದಿನ ತಾಲ್ಲೂಕಿನ ಬಟ್ಲಬಾವನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಳೆಯಿಂದ ಅದೂ ರದ್ದಾಯಿತು.

ಗ್ರಾಮಸ್ಥರಿಗೆ ಬೇಸರವಾಗ ದಿರಲೆಂದು ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಹಿಂದಿರುಗಿದರು.

‘ತೆಲಂ ಗಾಣ ಸಚಿವ ರಾಜೇಂದ್ರ ರೆಡ್ಡಿ ಕೂಡ ಬಂದಿದ್ದರು. ಗಡಿಭಾಗದಲ್ಲಿ ಅವರು ನಮಗೆ ಸಹಕಾರ ನೀಡಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT