ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

Published 20 ಏಪ್ರಿಲ್ 2024, 14:03 IST
Last Updated 20 ಏಪ್ರಿಲ್ 2024, 14:03 IST
ಅಕ್ಷರ ಗಾತ್ರ

ಕೆಜಿಎಫ್‌: ಕುಡಿಯುವ ನೀರು, ಮೇವು ಅರಿಸಿ ನಾಡಿನತ್ತ ಬಂದ ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಬೆಮಲ್‌ ನಗರದ ಹೊರವಲಯದಲ್ಲಿ ಸಾಯಿಸಿದೆ.

ಬೆಮಲ್‌ ನಗರದ ಬಳಿಯ ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಗಂಡು ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಸಾಯಿಸಿವೆ. ಸಮೀಪದ ಬಡಮಾಕನಹಳ್ಳಿ ಕಾಡಿನಿಂದ ಜಿಂಕೆಗಳು ನೀರನ್ನು ಅರಿಸಿ ಬರುತ್ತಿದ್ದವು. ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ಮತ್ತು ಕೈಗಾರಿಕೆಗಳಿದ್ದ ಜಾಗ ಜಿಂಕೆಗಳ ಅವಾಸಸ್ಥಾನವಾಗಿದ್ದು, ಅಲ್ಲಿದ್ದ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಜಿಂಕೆಗಳಿಗೆ ಮೇವು ಮತ್ತು ನೀರಿನ ಲಭ್ಯತೆ ಕಡಿಮೆಯಾಗಿದೆ. ಹಾಗಾಗಿ ಕಾಡಿನ ಜಿಂಕೆಗಳು ನಾಡಿಗೆ ಮೇವು ಅರಿಸಿ ಬರುತ್ತಿವೆ.

ಜಿಂಕೆಗಳು ಕಾಡಿನಿಂದ ನಾಡಿನತ್ತ ಬರದಂತೆ ತಡೆಯಲು ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ವಾಯ್ಸ್‌ ಫಾರ್‌ ವೈಲ್ಡ್ ಲೈಫ್ ಮುಖಂಡ ಸ್ನೇಕ್ ರಾಜ ಒತ್ತಾಯಿಸಿದ್ದಾರೆ. ಸಾವಿಗೀಡಾದ ಕೃಷ್ಣಮೃಗ ಕಳೇಬರವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT