ಮೊದಲ ಬಾರಿ ಕರ್ನಾಟಕ ರಾಜ್ಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆದಿರುವುದು ತುಂಬಾ ಸಂತಸ ತಂದಿದೆ. ರಾಷ್ಟ್ರೀಯ ಸೀನಿಯರ್ ತಂಡದಲ್ಲಿ ಆಡಬೇಕೆಂಬುದು ನನ್ನ ಕನಸು
ಬತ್ತೇಶ್ ಬ್ಯಾಸ್ಕೆಟ್‌ಬಾಲ್ ಆಟಗಾರ ಕೋಲಾರ
ನಮ್ಮ ಜಿಲ್ಲೆಯಿಂದ ಸುಮಾರು 15 ವರ್ಷಗಳ ಬಳಿಕ ರಾಜ್ಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದ ಆಟಗಾರ ಬತ್ತೇಶ್. ಅವರು ನಮ್ಮ ಕ್ಲಬ್‌ನಲ್ಲಿ ಆಡಿದ್ದಾರೆ. ಉದಯೋನ್ಮುಖ ಆಟಗಾರ
ಅಂಚೆ ಅಶ್ವಥ್ ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್ ಕೋಲಾರ
ಬ್ಯಾಸ್ಕೆಟ್‌ಬಾಲ್‌ನಲ್ಲಿ ಕೋಲಾರ ಹೆಜ್ಜೆ….
ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಅಧ್ಯಾಯವು ಕೋಲಾರ ಜಿಲ್ಲೆಯ ಹೆಸರಿಲ್ಲದೆ ಮುಗಿಯುವುದೇ ಇಲ್ಲ. ಈಗ ತುಸು ಹಿನ್ನಡೆ ಕಂಡಿದ್ದರೂ ಹಿಂದೆ ಅತ್ಯುತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿದೆ. ಅಂಚೆ ಅಶ್ವಥ್ ಸೇರಿದಂತೆ ಹಲವರು ಜಿಲ್ಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಯನ್ನು ಹೆಸರುವಾಸಿಯಾಗುವಂತೆ ಮಾಡಿದ್ದಾರೆ. ಕೋಲಾರದ ಮಿನಿ ಕ್ರೀಡಾಂಗಣ ಹಿಂಭಾಗ ಕ್ರೀಡಾ ಇಲಾಖೆಯಿಂದ ₹45 ಲಕ್ಷ ವೆಚ್ಚದಲ್ಲಿ ಬ್ಯಾಸ್ಕೆಟ್‌ಬಾಲ್ ಸಿಂಥೆಟಿಕ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಆಟಕ್ಕೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆ ಇದೆ. ಅಲ್ಲದೇ ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ಅಂಕಣದ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿವೆ. ಜಿಲ್ಲೆಯಿಂದ ಹಲವು ಆಟಗಾರರು ವಿವಿಧ ಹಂತಗಳಲ್ಲಿ ಆಡಿದ್ದಾರೆ. ರಾಮಕೃಷ್ಣ ಬಸಪ್ಪ ಶಿವರಾಜ್ ವೆಂಕಟೇಶ್ ಅರುಣ್ ಕುಮಾರ್ ಅಶ್ವಥ್ ರಘುವೀರ್ ಗುರುಪ್ರಸಾದ್ ಸೇರಿದಂತೆ ಹಲವಾರು ಮಂದಿ ಪ್ರತಿನಿಧಿಸಿದ್ದಾರೆ. ಅಖಿಲ ಭಾರತ ನಾಗರಿಕ ಸೇವೆಗಳ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್ ಕೂಡ ಆಡಿದ್ದಾರೆ. ಈಗಲೂ ಜಿಲ್ಲೆಯ ಹಲವು ಆಟಗಾರರು ವಿಶ್ವವಿದ್ಯಾಲಯ ತಂಡ ಪ್ರತಿನಿಧಿಸುತ್ತಿದ್ದಾರೆ.