ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಇಲ್ಲದೆ ತೊಂದರೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಾಧನೆ ಮನೆ ಮಾತಾಗಿದ್ದು ಡಿಸಿಸಿ ಬ್ಯಾಂಕ್‍ಗೆ ಆಡಳಿತ ಮಂಡಳಿ ಇಲ್ಲದಿರುವುದರಿಂದ ಹಲವಾರು ಮಹಿಳಾ ಸಂಘಗಳಿಗೆ ಭಾರಿ ತೊಂದರೆ ಆಗಿದೆ ಎಂದು ನಂಜೇಗೌಡ ಹೇಳಿದರು. ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ರೈತರ ಹಾಗೂ ಮಹಿಳೆಯರ ಹಿತಕ್ಕಾಗಿ ಉಳಿಸಿಕೊಳ್ಳಬೇಕು. ಸಂಸ್ಥೆಗಳು ಸಹಕಾರಿಗಳಾಗಿದ್ದು ಪಕ್ಷಾತೀತವಾಗಿ ಎರಡೂ ಸಹಕಾರ ಕ್ಷೇತ್ರಗಳನ್ನು ಉಳಿಸುವ ಕೆಲಸ ಮಾಡಲು ನಿರ್ದೇಶಕರ ಸಹಕಾರ ಅಗತ್ಯವಾಗಿರಬೇಕು ಎಂದರು.