ಕೋಲಾರ: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಜಿಲ್ಲೆಯ ಪೊಲೀಸರು ಸುಮಾರು ₹ 4.35 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರದ ವಿವಿಧ ಠಾಣೆಗಳ ಪೊಲೀಸರು ₹ 31.69 ಲಕ್ಷ ಮೌಲ್ಯದ 76 ಬೈಕ್, ₹ 24.53 ಲಕ್ಷ ಬೆಲೆ ಬಾಳುವ ಕಾರು, ₹ 36.67 ಲಕ್ಷ ಮೌಲ್ಯದ ಚಿನ್ನಾಭರಣ, ₹ 2.16 ಲಕ್ಷ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ₹ 15.11 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಕೆಜಿಎಫ್ ಪೊಲೀಸ್ ಜಿಲ್ಲಾ ಸಿಬ್ಬಂದಿಯು ₹ 21 ಲಕ್ಷ ಬೆಲೆ ಬಾಳವು 45 ಬೈಕ್, ₹ 3 ಲಕ್ಷ ಬೆಲೆ ಬಾಳುವ ಕಾರು, ₹ 37.38 ಲಕ್ಷ ಮೌಲ್ಯದ ಆಭರಣಗಳು, ₹ 10 ಲಕ್ಷ ಬೆಲೆ ಬಾಳುವ ರಕ್ತಚಂದನ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರು ಪೊಲೀಸರು ವಶಪಡಿಸಿಕೊಂಡ ಹಣ, ಆಭರಣ ಹಾಗೂ ವಾಹನಗಳನ್ನು ಗುರುವಾರ ವಾರಸುದಾರರಿಗೆ ಹಸ್ತಾಂತರಿಸಿದರು.

ಗಾಂಜಾ ಮಾರಾಟ: ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತಾಲ್ಲೂಕಿನ ವೇಮಗಲ್ ಪೊಲೀಸರು ₹ 5 ಲಕ್ಷ ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ಮಾರೀಶ್ವರನ್ ಮತ್ತು ಶ್ಯಾಮ್ ಬಂಧಿತರು. ಆರೋಪಿಗಳು ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಗಾಂಜಾ ತಂದು ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಜೋಡಿಕೃಷ್ಣಾಪುರದ ಬಳಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.