ಪ್ರಜಾವಾಣಿ ವಾರ್ತೆ

ಕೋಲಾರ: ರಾಜ್ಯ ಸರ್ಕಾರವು ನಿಗಮ ಮಂಡಳಿಗಳಲ್ಲಿ ನೀಡುವ ನಾಮನಿರ್ದೇಶನ, ಸದಸ್ಯ ಸ್ಥಾನಗಳಲ್ಲಿ ಪರಿಶಿಷ್ಟ ಜನಾಂಗದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಸಂಯೋಜಕ ನೆಹೆಮಿಯ ರಾಜು ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಬಗ್ಗೆ ಕೆಪಿಸಿಸಿ ಪರಿಶಿಷ್ಟ ಘಟಕದ ರಾಜ್ಯ ಅಧ್ಯಕ್ಷ ಆರ್.ಧರ್ಮಸೇನ ಸಹ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಎಲ್ಲಾ ಜಿಲ್ಲೆಗಳಿಗೂ ಹೋಗಿ ಈ ವಿಚಾರವಾಗಿ ಒತ್ತಾಯ ಮಾಡಲಾಗುತ್ತಿದೆ’ ಎಂದರು.

‘ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ ಪದ ತೆಗೆದು ಹಾಕುವ ಬಗ್ಗೆ ಆರ್ಎಸ್ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಖಂಡನೀಯ. ಸಂವಿಧಾನ ಬುಡಕ್ಕೆ ಕೈ ಹಾಕಿದರೆ ಬಿಜೆಪಿ ಈ ದೇಶದಲ್ಲಿ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆ ಮಾಡುವುದಕ್ಕೆ ದಲಿತ ಮಹಿಳೆ ನೇಮಕ ಮಾಡಿರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿರುವುದು ಬೇಸರದ ಸಂಗತಿ. ಇದು ಬದಲಾವಣೆ ಆಗಬೇಕಿದೆ. ವಿದ್ಯಾವಂತರಾಗುತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ. ಎಲ್ಲ ವರ್ಗದ ಜನರು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆಲ್ಲಾ ಕಡಿವಾಣ ಹಾಕಲು ಸರ್ಕಾರವೂ ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.

ಪರಿಶಿಷ್ಟ ಸಮುದಾಯದವರು ಜಾಗೃತರಾಗಬೇಕೋ ಅಥವಾ ಬೇರೆ ಸಮುದಾಯದವರು ಬದಲಾಗಬೇಕೋ ನಮಗೆ ತಿಳಿಯದು. ಬದಲಾವಣೆ ಆಗಬೇಕು. ಹಲ್ಲೆ, ದೌರ್ಜನ್ಯ ನಿಲ್ಲಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ‘ನಾಮನಿರ್ದೇಶನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜನಾಂಗಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕಿದೆ. ನಾವು ಹೈಕಮಾಂಡ್ ಸೂಚನೆಯಂತೆ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ’ ಎಂದರು.

‘ಶಾಸಕರಿಗೆ ನೀಡಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಅವಕಾಶಗಳನ್ನು ಕಾರ್ಯಕರ್ತರಿಗೂ ಕಲ್ಪಿಸಬೇಕಿದೆ. ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಹಿರಿಯ ಶಾಸಕರಾಗಿದ್ದು, ಅವರು ಕೋಮುಲ್ ಅಧ್ಯಕ್ಷರಾಗಲು ನಮ್ಮ ಅಭ್ಯಂತರವಿಲ್ಲ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ್ ಮಾತನಾಡಿ, ‘ನಾವು ಕೆ.ಎಚ್.ಮುನಿಯಪ್ಪ ಅವರ ಬೆಂಬಲಿಗರು, ಸದಾ ಶಾಂತಪ್ರಿಯರು. ಹಿಂದಿನ ಹಲ್ಲೆ ಘಟನೆ ಎಲ್ಲ ವಿಚಾರ ಹಿರಿಯರ ಗಮನಕ್ಕೆ ತಂದಿದ್ದೇವೆ. ಘಟಬಂಧನ್ ನಾಯಕರ ಪ್ರಶ್ನೆಗಳಿಗೆ ಕೋಮುಲ್ ಚುನಾವಣೆಯ ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಅವರ ಗೆಲುವೇ ಉತ್ತರವಾಗಿದೆ’ ಎಂದರು.

‘ಹಲ್ಲೆ ನಡೆಸಿದವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಪ್ರಚೋದನೆಯಿಂದ ಹೀಗೆ ಮಾಡಿದ್ದರು. ಕಾಂಗ್ರೆಸ್ನ ಸಂಸ್ಕೃತಿ ಇದಲ್ಲ. ಈ ಬಗ್ಗೆ ಚರ್ಚೆಗಳಾಗುತ್ತಿದೆ. ರಾಜ್ಯ ಅಧ್ಯಕ್ಷರು ಕ್ರಮಕೈಗೊಳ್ಳುತ್ತಾರೆ; ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಂಗಾರಪೇಟೆಯ ಅ.ನಾ.ಹರೀಶ್, ವೆಂಕಟೇಶ್, ರಾಮಯ್ಯ, ಮಾರಪ್ಪ, ಶ್ರೀನಿವಾಸಪುರ ರವಣಪ್ಪ ಇದ್ದರು.

Quote - ಜಿಲ್ಲೆಯ ಘಟಬಂಧನ್ ನಾಯಕರ ಪ್ರಶ್ನೆಗಳಿಗೆ ಕೋಮುಲ್ ಚುನಾವಣೆಯ ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಅವರ ಗೆಲುವೇ ಉತ್ತರವಾಗಿದೆ ಊರುಬಾಗಿಲು ಶ್ರೀನಿವಾಸ್ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ

Quote - ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ನ ಹಿರಿಯ ಶಾಸಕರಾಗಿದ್ದು ಅವರು ಕೋಮುಲ್ ಅಧ್ಯಕ್ಷರಾಗಲು ನಮ್ಮ ಅಭ್ಯಂತರವಿಲ್ಲ ಕೆ.ಜಯದೇವ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.