ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಡ್ರಗ್ಸ್‌ ಜಾಲ; 7 ತಿಂಗಳಲ್ಲಿ 51 ಪೆಡ್ಲರ್‌,ವ್ಯಸನಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Published : 3 ಆಗಸ್ಟ್ 2025, 7:26 IST
Last Updated : 3 ಆಗಸ್ಟ್ 2025, 7:26 IST
ಫಾಲೋ ಮಾಡಿ
Comments
ಕಳೆದ ಮಾರ್ಚ್‌ನಲ್ಲಿ ಡ್ರಗ್‌ ಪೆಡ್ಲರ್‌ನಿಂದ ವಶಪಡಿಸಿಕೊಂಡಿದ್ದ ₹ 50 ಲಕ್ಷ ಮೊತ್ತದ 806 ಗ್ರಾಂ ಎಂಡಿಎಂಎ ಮಾದಕ ವಸ್ತು
ಕಳೆದ ಮಾರ್ಚ್‌ನಲ್ಲಿ ಡ್ರಗ್‌ ಪೆಡ್ಲರ್‌ನಿಂದ ವಶಪಡಿಸಿಕೊಂಡಿದ್ದ ₹ 50 ಲಕ್ಷ ಮೊತ್ತದ 806 ಗ್ರಾಂ ಎಂಡಿಎಂಎ ಮಾದಕ ವಸ್ತು
ಡ್ರಗ್ಸ್‌ ಜಾಲ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ನಿರಂತರವಾಗಿ ನಿಗಾ ಇಟ್ಟು ಕ್ರಮ ವಹಿಸುತ್ತಿದ್ದೇವೆ. ನಶೆಮುಕ್ತ ಕೋಲಾರ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿ
ಕೆಲ ಯುವಜನತೆ ಡ್ರಗ್ಸ್ ವ್ಯಸನಿಗಳಾಗುತ್ತಿದ್ದು ಅದನ್ನು ನಿರ್ಮೂಲನೆ ಮಾಡಲು ಜಿಲ್ಲೆಯ ಪ್ರತಿ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಸಮಿತಿ ಸ್ಥಾಪಿಸಲಾಗಿದೆ. ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಈ ಸಮಿತಿಯಲ್ಲಿ ಇದ್ದಾರೆ. ಪದವಿ ಐಟಿಐ ವೈದ್ಯಕೀಯ ಕಾನೂನು ಸೇರಿದಂತೆ ಎಲ್ಲಾ ಕಾಲೇಜುಗಳಲ್ಲಿ ಈ ಸಮಿತಿ ಸ್ಥಾಪಿಸಿದ್ದು ಡ್ರಗ್ಸ್ ವ್ಯಸನಿಗಳ ಮೇಲೆ ನಿಗಾ ಇಡಲಾಗಿದೆ. ಕಾಲೇಜಿನ ಸುತ್ತಮುತ್ತ ಅಹಿತಕರ ಘಟನೆ ನಡೆದರೆ ನಶೆಯಲ್ಲಿರುವಂತಹ ವ್ಯಕ್ತಿಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ತಿಳಿಸಬೇಕು. ಮಾದಕ ವಸ್ತು ವಿರೋಧಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರೆ ನಶೆಗೆ ತುತ್ತಾದವರಿಗೆ ಚಿಕಿತ್ಸೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಇದಕ್ಕೆ ಪೊಲೀಸ್‌ ಇಲಾಖೆಯ ‘ಪಬ್ಲಿಕ್‌ ಐ’ ಮೂಲಕವೂ ನಿಗಾ ಇಡಲಾಗಿದೆ.
ಯುವಕರ ಮೇಲೆ ಪೊಲೀಸ್‌ ನಿಗಾ
ಡ್ರಗ್ಸ್‌ ಮಾಫಿಯಾ ಮಟ್ಟ ಹಾಕಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಾಗೂ ಎಚ್ಚರಿಕೆ ನೀಡಿದ್ದರಿಂದ ಜಿಲ್ಲೆಯ ಪೊಲೀಸರು ಅಭಿಯಾನ ಕೈಗೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 120 ಮಂದಿ ಯುವಕರನ್ನು ಕೋಲಾರದ ಪೊಲೀಸ್‌ ಭವನಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು. ಜೊತೆಗೆ ಪರೀಕ್ಷೆಗೆ ಕೂಡ ಒಳಪಡಿಸಿ ಪಾಸಿಟಿವ್‌ ನೆಗೆಟಿವ್‌ ಎಷ್ಟಿದೆ ಎಂಬುದನ್ನು ಪರಿಶೀಲಿಸಲಿದ್ದರು. ಮಾದಕ ವಸ್ತು ಬಳಕೆಯಾಗುತ್ತಿರುವ ಜಾಗವನ್ನು ಮೊದಲು ಗುರುತಿಸಿ ಅಲ್ಲಿಂದ ಯುವಕರನ್ನು ಕರೆತಂದು ವಿಚಾರಿಸಿದ್ದರು. ಕೋಲಾರ ನರಸಾಪುರ ವೇಮಗಲ್‌ ಗಲ್‌ಪೇಟೆ ಮುಳಬಾಗಿಲು ಮಾಲೂರಿನಿಂದ ಹೆಚ್ಚಿನವರನ್ನು ಕರೆತರಲಾಗಿತ್ತು.
3 ವರ್ಷಗಳಲ್ಲಿ 202 ಮಂದಿ ಬಂಧನ
ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಾ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ  ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 137 ಪ್ರಕರಣ ದಾಖಲಾಗಿವೆ. 202 ಆರೋಪಿಗಳನ್ನು ಬಂಧಿಸಲಾಗಿದೆ. ₹ 2.35 ಕೋಟಿ ಮೌಲ್ಯದ 260 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. 2025ರಲ್ಲಿ ಜುಲೈ ವರೆಗೆ 35 ಪ್ರಕರಣ ದಾಖಲಾಗಿವೆ. ಇದರಲ್ಲಿ ಗಾಂಜಾ ಸಂಬಂಧಿ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT