ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ನೋವು, ನಲಿವುಗಳ 2023ಕ್ಕೆ ವಿದಾಯ...

Published 31 ಡಿಸೆಂಬರ್ 2023, 7:41 IST
Last Updated 31 ಡಿಸೆಂಬರ್ 2023, 7:41 IST
ಅಕ್ಷರ ಗಾತ್ರ

ಜನವರಿ

09: ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವೆ. ಹೈಕಮಾಂಡ್‌ ಒಪ್ಪಿಗೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ–ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ.‌

11: ‘ಕಳೆದ ಚುನಾವಣೆಯಲ್ಲಿ ₹ 17 ಕೋಟಿ ಸಾಲ ಮಾಡಿದ್ದು, ಇನ್ನೂ ತೀರಿಸಿಲ್ಲ. ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಅವರನ್ನು ನಿಲ್ಲಿಸಿ ಗೆಲ್ಲಿಸಿದರೆ ನನ್ನನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತಾರೆ’ ಎಂದು ಕೆ.ಶ್ರೀನಿವಾಸಗೌಡ, ಬೆಂಬಲಿಗರೊಬ್ಬರ ಜೊತೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದ.

12: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜೆ.ಬಾಲಕೃಷ್ಣ ಆಯ್ಕೆ.

13: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಡಿ.ದೇವರಾಜ್‌ ವರ್ಗಾವಣೆ–ಎಂ.ನಾರಾಯಣ ನೂತನ ಎಸ್‌ಪಿ.

13: ಹೂವಿನಲ್ಲಿ ಅರಳಿದ ‘ಕಾಂತಾರ’ ದೈವ–ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ.

14: ಪಕ್ಷೇತರ ಶಾಸಕರಾಗಿದ್ದ ಎಚ್‌.ನಾಗೇಶ್‌ ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ.

15: ಕೋಲಾರದಲ್ಲಿ ನಡೆದ ಯೋಗಾಥಾನ್‌ನಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಯೋಗ ಪ್ರದರ್ಶನ.

19: ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ರತ್ನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಪ್ರಯುಕ್ತ ಶಕ್ತಿ ಕೇಂದ್ರಗಳ ಪ್ರಮುಖರ ಸಭೆ. ಟಿಕೆಟ್‌ ಆಕಾಂಕ್ಷಿಗಳಿಂದ ಮಾಹಿತಿ.

19: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ವಸತಿ ನಿಲಯ ಕಟ್ಟಡ ಹಾಗೂ ಟೊಮೆಟೊ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ.

21: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ ನೇಮಕ.

23: ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶ–ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಭಾಗಿ.

26: ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ₹ 8.55 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲು ಮುನಿರತ್ನ ಶಂಕುಸ್ಥಾಪನೆ.

30: ಕೋಲಾರ ಕ್ಷೇತ್ರದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗಾಟ.

ಫೆಬ್ರುವರಿ

08: ಜಿಲ್ಲಾ ಬಿಜೆಪಿ ಎಸ್‌ಸಿ ಸಮಾವೇಶ–ಸಿ.ಟಿ.ರವಿ ಭಾಗಿ

10: ಲೋಕಾಯುಕ್ತ ಪೊಲೀಸರಿಂದ ಡಿಸಿಎಫ್‌ ವೆಂಕಟೇಶ್‌ ವಸತಿಗೃಹ, ಕಚೇರಿ ಶೋಧ

13: ವೇಮಗಲ್‌ನಲ್ಲಿ ಕಾಂಗ್ರೆಸ್‌ನಿಂದ ರೈತ ಮಹಿಳಾ ಸಮಾವೇಶ–ಸಿದ್ದರಾಮಯ್ಯ ಭಾಗಿ-ಕಾಂಗ್ರೆಸ್‌ ಗೆದ್ದರೆ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಘೋಷಣೆ.

14: ಮುಳಬಾಗಿಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.

17: ರಾಜ್ಯ ಬಜೆಟ್‌ ಮಂಡನೆ: ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಪ್ರಸ್ತಾಪ.

17: ಕೆ.ಆರ್‌.ರಮೇಶ್‌ ಕುಮಾರ್‌ ಅವರ ಪತ್ನಿ ವಿಜಯಮ್ಮ (69) ಅನಾರೋಗ್ಯದಿಂದ ನಿಧನ.

18: 14ರ ಹರೆಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಕಾಮಸಮುದ್ರಂ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ವರು ಅಪರಾಧಿಗಳಿಗೆ ಪೋಕ್ಸೊ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ.

ಮಾರ್ಚ್‌

07: ಅಡ್ಡಂಡ ಸಿ.ಕಾರ್ಯಪ್ಪ ನಿರ್ದೇಶನದ ವಿವಾದಿತ ‘ಟಿಪ್ಪು ನಿಜ ಕನಸುಗಳು’ ನಾಟಕವು ಟಿ.ಚನ್ನಯ್ಯ ರಂಗಮಂದಿರದಲ್ಲಿ ಪೊಲೀಸರ ಕಟ್ಟೆಚ್ಚರದಲ್ಲಿ ನಡೆಯಿತು.

09: ಮಾಲೂರಿನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಕಿತ್ತಾಟ.

09: ಹಣೆಗೆ ಬೊಟ್ಟು ಇಟ್ಟುಕೊಂಡಿಲ್ಲವೆಂದು ಮಹಿಳೆಯ ನಿಂದಿಸಿದ ಸಂಸದ ಎಸ್‌.ಮುನಿಸ್ವಾಮಿ–ಆಕ್ರೋಶ.

11: ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿ ತೊಟದಲ್ಲಿ ಆಹಾರ ಧಾನ್ಯ ಅಕ್ರಮ ದಾಸ್ತಾನು: ಶಾಸಕಿ ರೂಪಕಲಾ ವಿರುದ್ಧ ಪ್ರಕರಣ ದಾಖಲು.

13: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯಲು ಕೋಲಾರಕ್ಕೆ ಹೊರಟಿದ್ದ ತಾಲ್ಲೂಕಿನ ಷಾಪೂರು ಗ್ರಾಮದ ವಿದ್ಯಾರ್ಥಿನಿ ಬಸ್‌ ಹತ್ತುತ್ತಿದ್ದಾಗ ಕಡಿಮೆ ರಕ್ತದೊತ್ತಡದಿಂದ ಕುಸಿದು ನಿಧನ.

17: ಶ್ರೀನಿವಾಸಪುರ ತಾಲ್ಲೂಕಿನ ಚಾಕಪ್ಪಲ್ಲಿ ಗ್ರಾಮ ಸಮೀಪ ಕಾರೊಂದು ಹಳ್ಳಕ್ಕೆ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ನಿಧನ.

20: ಆಲಿಕಲ್ಲು ಮಳೆಗೆ 3,400 ಹೆಕ್ಟೇರ್‌ ಮಾವಿಗೆ ಹಾನಿ

20:ಕೋಲಾರದಿಂದ ಸ್ಪರ್ಧಿಸುವಂತೆ ಆಗ್ರಹಿಸಿ ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಕುರುಬರು, ಅಲ್ಪಸಂಖ್ಯಾತರು, ದಲಿತ, ಅಹಿಂದ ವರ್ಗಗಳ ಮುಖಂಡರು ನಿರ್ಧಾರ.

20: ಸಿ.ಎಂ.ಇಬ್ರಾಹಿಂ ಮೇಲೆ ನೋಟು ತೂರಿದ ಕಾರ್ಯಕರ್ತ!

23: ಇರಾನಿ ಗ್ಯಾಂಗ್‌ನ 6 ಮಂದಿ ಬಂಧನ.

24: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವದಿಂದ ಅನರ್ಹ. ಇದಕ್ಕೆ ಕಾರಣವಾದ ಮೂಲ ವ್ಯಕ್ತಿ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಿ.ಎಂ.ರಘುನಾಥ್‌. ಹೋರಾಟಕ್ಕೆ ಜಯ ಸಿಕ್ಕಿದೆ ಎಂದ ರಘುನಾಥ್‌.

25: ದೇವನಹಳ್ಳಿ ಕ್ಷೇತ್ರದ ಟಿಕೆಟ್‌: ರಾಜ್ಯ ರಾಜಕಾರಣ ಪ್ರವೇಶಿಸಿದ ಕೆ.ಎಚ್‌.ಮುನಿಯಪ್ಪ.

ಏಪ್ರಿಲ್‌

02: ಬಂಗಾರಪೇಟೆಯಲ್ಲಿ ಬಾಣಂತಿ ಸಾವು–ಆಸ್ಪತ್ರೆ ಮುಂದೆ ಪ್ರತಿಭಟನೆ.

06: ಬಿಎಸ್‌ಎಫ್‌ ಯೋಧರಿಗೆ ಹೂಮಳೆಯ ಸ್ವಾಗತ.

16: ಕೋಲಾರದಲ್ಲಿ ನೆಲದಲ್ಲಿ ಮತ್ತೆ ಗುಡುಗಿದ ರಾಹುಲ್ ಗಾಂಧಿ–ಜೈ ಭಾರತ್ ಸಮಾವೇಶ.

16: ನಿಯಮ ಮೀರಿ ಎಟಿಎಂ ವಾಹನದಲ್ಲಿ ‌ಸಾಗಿಸುತ್ತಿದ್ದ ₹ 1.81 ಕೋಟಿ ವಶ.

15: ರಮೇಶ್ ಕುಮಾರ್ ಮುನಿಸು: ಹೆಲಿಕಾಪ್ಟರ್‌ನಲ್ಲಿ ಬಂದ ರಣದೀಪ್‌ ಸಿಂಗ್‌ ಸುರ್ಜೇವಾಲಾ.

15: ದಿಢೀರನೇ ಕೊತ್ತೂರು ಮಂಜುನಾಥ್‌ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್‌ ಘೋಷಣೆ.

15: ಚುನಾವಣಾ ರಾಜಕಾರಣಕ್ಕೆ ವಿದಾಯ: ವಿ.ಆರ್.ಸುದರ್ಶನ್‌.

15: ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್ ನೀಡದ್ದಕ್ಕೆ‌ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಸ್ಲಿಂ ಮುಖಂಡರ ಆಕ್ರೋಶ.

20: ಕೊತ್ತೂರು ಒತ್ತಡಕ್ಕೆ ಮಣಿದ ಕಾಂಗ್ರೆಸ್‌: ಮುಳಬಾಗಿಲು ‘ಕೈ’ ಅಭ್ಯರ್ಥಿ ದಿಢೀರ್‌ ಬದಲು!

21: ಬಾಲಕನನ್ನು ಅಟ್ಟಾಡಿಸಿ ಗಾಯಗೊಳಿಸಿದ ಬೀದಿನಾಯಿಗಳು.

21: ಶ್ರೀನಿವಾಸಪುರದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ಎಸ್.ಎಂ.ಕೌಶಿಕ್‌ ರಾಜ್ಯಕ್ಕೆ ಪ್ರಥಮ.

24: ಹೈಟೆಕ್‌ ಜೂಜು ಅಡ್ಡೆ ಮೇಲೆ ದಾಳಿ.

24: ಅಕ್ರಮ ಆಸ್ತಿ ಆರೋಪ; ಇಒ ವೆಂಕಟೇಶಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ.

29: ಕೋಲಾರ ತಾಲ್ಲೂಕಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ. ಚುನಾವಣಾ ಪ್ರಚಾರ ಸಮಾವೇಶ.

ಮೇ

10: ವಿಧಾನಸಭೆ ಚುನಾವಣೆ–ಮತದಾನ.

13: ಮತ ಎಣಿಕೆ: ಭದ್ರಕೋಟೆ ರಕ್ಷಿಸಿಕೊಂಡ ಕಾಂಗ್ರೆಸ್‌!

13: 248 ಮತಗಳಿಂದ ಗೆದ್ದ ನಂಜೇಗೌಡ–ಮಂಜುನಾಥ್‌ ಗೌಡಗೆ ಬೇಸರ.

ಜೂನ್‌

11: ಬಸ್ ಚಲಾಯಿಸಿದ ಕೆಜಿಎಫ್ ಶಾಸಕಿ ರೂಪಕಲಾ!

15: ಹೊರರಾಜ್ಯಗಳಿಂದ ಬೇಡಿಕೆ; ಟೊಮೆಟೊ ದರ ಹೆಚ್ಚಳ!

19: ವೆಂಕಟ್‌ ರಾಜಾ ವರ್ಗಾವಣೆ–ಅಕ್ರಂ ಪಾಷ ನೂತನ ಜಿಲ್ಲಾಧಿಕಾರಿ

26: ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ–6 ಮಹಿಳೆಯರ ರಕ್ಷಣೆ

27: ಪರಿಶಿಷ್ಟ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ.

ಜುಲೈ

02: ಕೆಜಿಎಫ್‌ ನೂತನ ಎಸ್ಪಿಯಾಗಿ ಶಾಂತರಾಜು ಅಧಿಕಾರ ಸ್ವೀಕಾರ.

02: ಸಿ.ಎಂ.ಮುನಿಯಪ್ಪ, ಹರೀಶ್‌ ಹಂದೆ, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ ಗೌರವ ಡಾಕ್ಟರೇಟ್.

11: 15 ಕೆ.ಜಿ ಬಾಕ್ಸ್‌ ಟೊಮೊಟೊ ದರ ₹ 2,200–ಸಾರ್ವಕಾಲಿಕ ದಾಖಲೆ.

15: ಟೊಮೆಟೊ: ಕುಟುಂಬಕ್ಕೆ ₹ 40 ಲಕ್ಷ ಸಂಪಾದನೆ.

30: ಟೊಮೆಟೊ ತುಂಬಿದ ಲಾರಿ ನಾಪತ್ತೆ; ಪ್ರಕರಣ ದಾಖಲು.

ಆಗಸ್ಟ್‌

05: ‘ಗೃಹಜ್ಯೋತಿ’ಗೆ ಸಚಿವ ಬೈರತಿ ಸುರೇಶ್‌ ಚಾಲನೆ.

12: ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಶ್ವಾನ.

13: ₹ 30 ಲಕ್ಷ ಮೌಲ್ಯದ 30 ಬೈಕ್ ವಶ.

14: ಟೊಮೆಟೊ ಬೆಲೆ ಕುಸಿತ; ಆತಂಕದಲ್ಲಿ ಬೆಳೆಗಾರರು.

23: ಕೆ.ಜಿ. ಟೊಮೆಟೊ ಬೆಲೆ ₹23ಕ್ಕೆ ಕುಸಿತ.

24: ಶ್ರೀನಿವಾಸಪುರ: 120 ಎಕರೆ ಒತ್ತುವರಿ ತೆರವು.

27: ತೊಟ್ಲಿ: ಪರಿಶಿಷ್ಟ ಬಾಲಕನ ‌ಪ್ರೀತಿಸಿದ ಮಗಳ ಹತ್ಯೆ (ಮರ್ಯಾದೆಗೇಡು ಹತ್ಯೆ).

28: ಕೋಚಿಮುಲ್‌ ಸಭೆಯಲ್ಲಿ ಭಾರಿ ಗದ್ದಲ.

29: ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯಿಂದ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ.

ಸೆಪ್ಟೆಂಬರ್‌

08: ಬಿಜೆಪಿ ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ–ಸಂಸದ ಮುನಿಸ್ವಾಮಿಗೂ ಕಚ್ಚಿದ ಜೇನ್ನೊಣ.

09: ಮೇಲೆ ರೈತರು ಕಲ್ಲು ತೂರಾಟ.

10: ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿ: ಸಂಸದ, ಮುಖಂಡರು, ರೈತರ ಮೇಲೆ ಎಫ್‌ಐಆರ್‌.

12: ಅಳಿಯನಿಂದ ಪತ್ನಿ, ಮಾವನ ಕೊಲೆ; ಪೊಲೀಸರಿಂದ ಆರೋಪಿ ಕಾಲಿಗೆ ಗುಂಡು.

14: ಜಿಲ್ಲೆಯ ಐದೂ ತಾಲ್ಲೂಕಿನಲ್ಲಿ ತೀವ್ರ ಬರ.

14: ಅಪಹರಣವಾದ 1 ಗಂಟೇಲಿ ಬಾಲಕನ ಪತ್ತೆ.

15: ಟೊಮೆಟೊ ದರದಲ್ಲಿ ಭಾರಿ ಕುಸಿತ.

20: ಲಕ್ಷ್ಮಿಸಾಗರ ಗ್ರಾಮಕ್ಕೆ ಸಣ್ಣ ನೀರಾವರಿ ಸಚಿವರ ಭೇಟಿ. ಗ್ರಾಮಸ್ಥರೊಂದಿಗೆ ಚರ್ಚೆ; ಸೌಲಭ್ಯದ ಭರವಸೆ.

25: ಜನತಾ ದರ್ಶನ: ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ-ಸಂಸದ ಎಸ್‌.ಮುನಿಸ್ವಾಮಿ ಜಟಾಪಟಿ.

29: ತಲವಾರ್‌ ಅಳವಡಿಕೆ ಪ್ರಕರಣ; ಐವರ ವಿರುದ್ಧ ಎಫ್‌ಐಆರ್‌.

29: ಕರ್ನಾಟಕ ಬಂದ್‌: ಕೋಲಾರ, ಕೆಜಿಎಫ್‌ ಯಶಸ್ಸು; ಉಳಿದೆಡೆ ನೀರಸ.

30: ಜಿಲ್ಲೆಯಲ್ಲಿ 35,974 ಹೆಕ್ಟೇರ್‌ ಬೆಳೆ ನಷ್ಟ.

ಅಕ್ಟೋಬರ್‌

02: ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌; ಡಿವೈಇಎಸ್‌ ಮೈಸೂರಿನ ಮಹಿಳೆಯರಿಗೆ ಪ್ರಶಸ್ತಿ. ಯಂಗ್ ಓರಿಯನ್ಸ್ ಚಾಂಪಿಯನ್.

03: ಬಿಜೆಪಿ ಬೃಹತ್ ಪ್ರತಿಭಟನೆ–ಡಿ.ಸಿ, ಎಸ್‌.ಪಿ, ಡಿಸಿಎಫ್‌ಗೆ ಬಿಜೆಪಿ ಎಚ್ಚರಿಕೆ. ಖಡ್ಗ, ತ್ರಿಶೂಲ, ಗದೆ ಹೊರತೆಗೆದರೆ ಏನಾಗುತ್ತೆ ಗೊತ್ತೆ: ಸಿ.ಟಿ.ರವಿ ಪ್ರಶ್ನೆ

10: ಕೋಲಾರಮ್ಮ ಕೆರೆಯಲ್ಲಿ ನೊರೆ ರಾಶಿ.

20: ಕೋಚಿಮುಲ್‌ ಅಧ್ಯಕ್ಷ, ನಿರ್ದೇಶಕರ ವಿದೇಶಿ ಪ್ರವಾಸ!

20: ಕೂಲಿ ಕೇಳಿದ್ದಕ್ಕೆ ಕಟ್ಟಿ ಹಾಕಿ ಪರಿಶಿಷ್ಟ ಯುವಕನ ಮೇಲೆ ಹಲ್ಲೆ.

24: ಎಂ.ಶ್ರೀನಿವಾಸನ್‌ ಕೊಲೆ ಪ್ರಕರಣ: ಆರೂ ಆರೋಪಿಗಳ ಬಂಧನ- ಇಬ್ಬರಿಗೆ ಗುಂಡೇಟು.

26: ಬ್ಯಾಗ್‌ನಲ್ಲಿ ಮಗು ಅಪಹರಿಸಿದ ಮಹಿಳೆಯರು!

27: ಮತ್ತೆ ತಾಯಿ ಮಡಿಲು ಸೇರಿದ ಹಸುಳೆ!

31: ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ (ಲಕ್ಷ್ಮಿಪತಿ ಕೋಲಾರ (ಸಾಹಿತ್ಯ), ಟಿ.ಎಸ್‌.ದಿವ್ಯಾ (ಕ್ರೀಡೆ) ಹಾಗೂ ಕೆ.ಚಂದ್ರಶೇಖರ್‌ (ಶಿಕ್ಷಣ).

ನವೆಂಬರ್‌

01: ಆನೆ ಮೇಲೆ ಕೋಲಾರಮ್ಮನ ಮೆರವಣಿಗೆ.

04: ಕೋಲಾರ: 17 ಬಾಲಕನ ಬರ್ಬರ ಕೊಲೆ–

05: ಬಿಜೆಪಿ ಬರ ಅಧ್ಯಯನ ತಂಡ ಭೇಟಿ.

05: ಇಬ್ಬರು ಕಾಂಗ್ರೆಸ್ ಮುಖಂಡರ ಕೊಲೆ ಪ್ರಕರಣ: ಪಿಎಸ್‍ಐ ಸೇರಿ 7 ಪೊಲೀಸರು ಅಮಾನತು.

05: ಮಾಲೂರು:ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್.

06: ಬಾಲಕನ ಹತ್ಯೆ: ಮೂವರು ಪೊಲೀಸ್‌ ಸಿಬ್ಬಂದಿ ಅಮಾನತು.

09: ಶ್ರೀನಿವಾಸಪುರ, ಮಾಲೂರು, ಕೋಲಾರದಲ್ಲಿ ನಡೆದ ಕೊಲೆ ಪ್ರಕರಣ: ಮೂರೂ ಪ್ರಕರಣಗಳ ಆರೋಪಿಗಳು ಪತ್ತೆ–ಐಜಿಪಿ.

09: ಬಾಲಕನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಏಳು ಮಂದಿ ಬಂಧನ–ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು.

11: ಯರಗೋಳ್‌ ಜಲಾಶಯ: ಮುಖ್ಯಮಂತ್ರಿ ಉದ್ಘಾಟನೆ.

12: ಪಾನಮತ್ತರಾಗಿ ಬಾರ್‌ನಲ್ಲಿ ಹಲ್ಲೆಗೆ ಯತ್ನಿಸಿದ ಎಎಸ್‌ಐ.

14: ಕುರುಡುಮಲೆಗೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ.

17: ಪಾನಮತ್ತರಾಗಿ ಹಲ್ಲೆಗೆ ಯತ್ನ; ಎಎಸ್‌ಐ ಅಮಾನತು.

18: ಡಿಸಿಸಿ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ.

28: ರಜೆಗಾಗಿ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ!

ಡಿಸೆಂಬರ್‌

02: ಕಾಂಗ್ರೆಸ್‌ ಟಿಕೆಟ್‌; ಹೆಚ್ಚಿದ ಆಕಾಂಕ್ಷಿಗಳು.

10: ನಾಗಲಾಪುರ: 18 ಮಠಾಧೀಶರ ಸಮಾಗಮ.

14: 8 ತಿಂಗಳಲ್ಲಿ 98 ಬಾಲ ಗರ್ಭಿಣಿಯರು!

18: ಕೋಚಿಮುಲ್‌ ನೇಮಕಾತಿ: ಘೋಷಣೆಗೆ ಮುನ್ನ ಹರಿದಾಡುತ್ತಿರುವ ಪಟ್ಟಿ!

16: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ!

17: ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿದ ಪ್ರಕರಣ; 'ಪ್ರಜಾವಾಣಿ' ವರದಿ ಉಲ್ಲೇಖ–ಇಬ್ಬರ ಬಂಧನ.

21: ಕೋವಿಡ್‌ ಆತಂಕ; ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ.

22: ಕೋಚಿಮುಲ್‌ ನೇಮಕಾತಿ: 75 ಅಭ್ಯರ್ಥಿ ಹೆಸರು ಓದಿದ ಅಧ್ಯಕ್ಷರು!

26: ಏಳು ತಿಂಗಳ ನಂತರ ಬಯಲಾದ ಮರ್ಯಾದೆಗೇಡು ಹತ್ಯೆ.

25: ಆದಿಮ: ಆ ಬೆಟ್ಟದ ಬೆಳದಿಂಗಳಲ್ಲಿ ಹುಣ್ಣಿಮೆ ಹಾಡು…

27: ಮಕ್ಕಳಿಂದ ಮಲ ಗುಂಡಿ ಸ್ವಚ್ಛತೆ– ಕ್ರೂರ ಕೃತ್ಯ-ಮುಖ್ಯಮಂತ್ರಿ

28: ಜಿಲ್ಲೆಯಲ್ಲಿ ಐದು ಕೋವಿಡ್‌ ಪ್ರಕರಣ.

28: ಬಾಲ ಗರ್ಭಿಣಿಯರು: ಮೂರು ದಿನದಲ್ಲಿ 39 ಎಫ್‌ಐಆರ್‌!

28: ಮಲ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ; ಮತ್ತಿಬ್ಬರ ಬಂಧನ

29: ಬಾಲಕಿ ಮೇಲೆ ಅತ್ಯಾಚಾರ; ಐವರ ಬಂಧನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT