ಕೋಲಾರ: ಜಿಲ್ಲೆಯ ಕಾರ್ಮಿಕರ ಮಕ್ಕಳಿಗಾಗಿ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದಲ್ಲಿ ವಿಶಿಷ್ಟ ಸೌಲಭ್ಯದ ಶ್ರಮಿಕ ವಸತಿ ಶಾಲೆ ತಲೆ ಎತ್ತಲಿದೆ.

ಕೆಲಸ ನಿಮಿತ್ತ ವಿವಿಧೆಡೆ ವಲಸೆ ಹೋಗುವ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರ ಅಭ್ಯುದಯಕ್ಕೆ ₹ 38.25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ಕಾರ್ಮಿಕ ಇಲಾಖೆಯಿಂದ ನಿರ್ಮಿಸಲಾಗುತ್ತದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಸತಿ ಶಾಲೆ ಆರಂಭವಾಗಲಿದ್ದು, 6 ನೇ ತರಗತಿಯಿಂದ 12 ನೇ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುತ್ತದೆ. ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಯಳೇಸಂದ್ರ ಗ್ರಾಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯು ಈಗಾಗಲೇ ಜಾಗ ಗುರುತಿಸಿದೆ.

ಪ್ರತಿ ಶಾಲಾ ಕಟ್ಟಡವು ತರಗತಿಗೆ ಒಂದರಂತೆ ಏಳು ಕೊಠಡಿ, ಐದು ಪ್ರಯೋಗಾಲಯ, ಗ್ರಂಥಾಲಯ, ಬಹುಚಟುವಟಿಕೆ ಕೊಠಡಿ, ಕ್ರೀಡಾ ಸಾಮಗ್ರಿ ಕೊಠಡಿ, ಪ್ರಯೋಗಾಲಯ, ಕಚೇರಿ ಸಿಬ್ಬಂದಿ ಸೇರಿದಂತೆ ಇತರ ಕೊಠಡಿಗಳನ್ನು ಹೊಂದಿರುತ್ತದೆ. ಬಾಲಕ, ಬಾಲಕಿಯರ ಪ್ರತ್ಯೇಕ ವಸತಿ ಗೃಹ ಕೂಡಾ ನಿರ್ಮಾಣ ಆಗಲಿವೆ. ಅಲ್ಲಿ ಭೋಜನಾಲಯ, ಅಡುಗೆ ಮನೆ, ಶಿಕ್ಷಕರಿಗೆ ಪ್ರತ್ಯೇಕ ವಸತಿ ಗೃಹ ನಿರ್ಮಾಣವಾಗಲಿವೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಕನಸಿನ ಯೋಜನೆ ಇದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದರು.

ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದಾದ್ಯಂತ 31 ಜಿಲ್ಲೆಗಳಲ್ಲಿ ₹1,125.25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳು ಪ್ರಾರಂಭವಾಗಲಿವೆ.

₹33 ಕೋಟಿ ವೆಚ್ಚದಲ್ಲಿ ಕಟ್ಟಡ, ಇನ್ನುಳಿದ ಅನುದಾನದಲ್ಲಿ ಪೀಠೋಪಕರಣ, ಪ್ರಯೋಗಾಲಯ ಉಪಕರಣ ಖರೀದಿ, ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ.

ಕೋಲಾರ ಜಿಲ್ಲೆಗೆ ಎರಡು ಶ್ರಮಿಕ ಶಾಲೆಗಳು ಸಿಗುವ ಸಾಧ್ಯತೆ ಇದೆ. ಬಂಗಾರಪೇಟೆ ತಾಲ್ಲೂಕಿನ ಯಳೇಸಂದ್ರಕ್ಕೆ ಈಗಾಗಲೇ ಮಂಜೂರಾಗಿದೆ. ಇದಲ್ಲದೇ; ಮಾಲೂರು ತಾಲ್ಲೂಕಿನ ಟೇಕಲ್ನಲ್ಲೂ ಒಂದು ಶ್ರಮಿಕ ಶಾಲೆ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅ.30ಕ್ಕೆ ಮಾಲೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದು, ಆ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರು ಉದ್ಯೋಗ ನಿಮಿತ್ತ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕುಟುಂಬ ಸಮೇತ ವಲಸೆ ಹೋಗುತ್ತಿರುತ್ತಾರೆ. ಆಗ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ಶಾಲೆ ತೊರೆಯುವುದು, ಶಿಕ್ಷಣದಿಂದ ವಂಚಿತರಾದ ಉದಾಹರಣೆಗಳೂ ಇವೆ. ಹೀಗಾಗಿ, ಕಾರ್ಮಿಕ ಇಲಾಖೆಯು ಶ್ರಮಿಕ ವಸತಿ ಶಾಲೆ ನಿರ್ಮಾಣದ ಯೋಜನೆ ರೂಪಿಸಿದೆ. ಕೋಲಾರ ಜಿಲ್ಲೆಯಲ್ಲಿ ಸಾವಿರಾರು ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರು, ಇತರೆ ಕಾರ್ಮಿಕರು ಇದ್ದಾರೆ. ಯೋಜನೆಯಂತೆ ಶ್ರಮಿಕ ವಸತಿ ಶಾಲೆ ನಿರ್ಮಾಣವಾದರೆ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.