ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ

ಇಟಿಸಿಎಂ ಆಸ್ಪತ್ರೆ ಅಭಿವೃದ್ಧಿಗೆ ವಿ.ಆರ್‌. ಸುದರ್ಶನ್‌ ಸಲಹೆ
Last Updated 16 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ಕೋಲಾರ: ‘ಇಟಿಸಿಎಂ ಆಸ್ಪತ್ರೆ ಹಾಗೂ ಮೆಥೋಡಿಸ್ಟ್ ಶಾಲೆಗೆ ದೊಡ್ಡ ಪರಂಪರೆ ಇದ್ದು, ಅವುಗಳನ್ನು ಉಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸಲಹೆ ನೀಡಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತ‌ನಾಡಿದರು.

‘ಕ್ರೈಸ್ತ ಮಿಷನರಿಗಳು ಶೈಕ್ಷಣಿಕ ಹಾಗೂ ಆರೋಗ್ಯದ ಉದ್ದೇಶದಿಂದ ನೂರು ವರ್ಷಗಳ ಹಿಂದೆಯೇ ಸ್ಥಾಪಿಸಿ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿವೆ. ಅವುಗಳ ಉಳಿವಿಗಾಗಿ ಸಂಬಂಧಪಟ್ಟ ವೇದಿಕೆಗಳಲ್ಲಿ ಸಮುದಾಯದವರು ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ’ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಯುಸರ್ಕಾರದ ಸೌಲಭ್ಯ ಪಡೆಯುವಂತೆ ಜಾಗೃತಿ ಮೂಡಿಸಬೇಕು. ‌ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮುದಾಯವನ್ನು ಮುಂಚೂಣಿಗೆ ತರುವಂಥ ವೇದಿಕೆ ಒದಗಿಸುವ ಕೆಲಸವನ್ನು ಸಂಘಟನೆ ಮಾಡಬೇಕು’ ಎಂದರು.

ಸಂಘದ ಅಧ್ಯಕ್ಷ ಜಯದೇವ್ ಪ್ರಸನ್ನ ಮಾತನಾಡಿ, ‘ಪೂರ್ವಜರು ಉಳಿಸಿ ಬೆಳೆಸಿದ ಕ್ರೈಸ್ತರ ಸಂಸ್ಥೆಗಳನ್ನು ಕೆಲವರು ಮಾರಾಟ ಮಾಡಲು ಹೊರಟಿದ್ದು, ಎಷ್ಟೇ ಅಡೆತಡೆ ಬಂದರೂ ಮುನ್ನುಗ್ಗಿ ಹೋರಾಡಲು ಸಿದ್ಧರಿದ್ದೇವೆ’
ಎಂದರು.

ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿದರು. ಸಂಸ್ಥೆಯ ಸುಧಾಕರ್, ಕಾಂಗ್ರೆಸ್ ಮುಖಂಡರಾದ ಕೆ. ಜಯದೇವ್, ಕಿಶೋರ್ ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್‌, ಖಜಾಂಚಿ ಡಾ.ಎಂ. ಜೋಸೆಫ್, ಉಪಾಧ್ಯಕ್ಷರಾದ ಕುಮಾರ್, ದೇವಕುಮಾರ್, ಮುಖಂಡರಾದ ಸುರೇಂದ್ರ ಬಾಬು, ಎಡಿನ್, ಜೇಮ್ಸ್ ಪಾಸ್ಟರ್, ಡೇವಿಡ್, ಪ್ರಭಾಕರ್, ರಾಜು, ಬೆತ್ತನಿ ರಾಜಣ್ಣ, ಗಲ್‌ಪೇಟೆ ದೀಪು, ಕಾರ್ಪೆಂಟರ್ ರಾಜಣ್ಣ, ಸಾರಿಗೆ ನಗರ ರವಿ, ತಬಲ ಸೂರಿ, ಪ್ರಸನ್ನಕುಮಾರ್, ಜನಘಟ್ಟ ಕೃಷ್ಣಮೂರ್ತಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT