ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಬಲೆಗೆ ಮಹಿಳಾ ಎಎಸ್‌ಐ

Last Updated 24 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಕೆಜಿಎಫ್‌: ಕೌಟುಂಬಿಕ ಕಲಹ ಪ್ರಕರಣದಲ್ಲಿ ಸಹಾಯ ಮಾಡಲು ವರ್ತಕರೊಬ್ಬರಿಂದ ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಫರೀದಾ ಬಾನು ಅವರನ್ನುಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಗರದ ಫಿಶ್‌ಲೈನ್‌ ನಿವಾಸಿ ಹಾಗೂ ವರ್ತಕ ಯೂಸುಫ್‌ ಎಂಬುವರಿಂದ ಫರೀದಾ ಬಾನು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಯೂಸುಫ್‌ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹಣ ಪಡೆಯುವಾಗಲೇ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಡಿ.12 ರಂದು ಊರಿಗಾಂ ಪೇಟೆಯ ಸೈಯದ್ ಯೂಸುಫ್ ಅವರ ಕುಟುಂದವರು ಪರಸ್ಪರ ಜಗಳ ಮಾಡಿಕೊಂಡಿದ್ದರು. ಜಗಳ ಬಿಡಿಸಿದ ಯೂಸುಫ್ ಅವರನ್ನೇ ಠಾಣೆಗೆ ಕರೆಸಿದ ಫರೀದಾ ಬಾನು, ‘ನೀನೇ ಹೇಳಿಕೊಟ್ಟು ಗಲಾಟೆ ಮಾಡಿಸಿದ್ದೀಯಾ. ನಿನ್ನನ್ನು ಜೈಲಿಗೆ ಕಳಿಸುತ್ತೇನೆ’ ಎಂದು ದಬಾಯಿಸಿದ್ದರು. ನಂತರ ರಾತ್ರಿ ಅವರ ಅಣ್ಣ ಅಕ್ರಂ ಅವರನ್ನು ಕರೆಸಿಕೊಂಡು,₹4,500, ನಂತರ ಯೂಸುಫ್ ಅವರಿಂದ ₹1,500 ಲಂಚ ಪಡೆದಿದ್ದರು. ಸಹಾಯ ಮಾಡಲು ₹20 ಸಾವಿರ ರೂಪಾಯಿ ಆಗುತ್ತದೆ. ತಂದು ಕೊಡು ಎಂದು ಬೆದರಿಕೆ ಹಾಕಿದ್ದರು’ ಎಂದು ಯೂಸುಫ್‌ ಅವರು ಲೋಕಾಯಕ್ತರಿಗೆ ದೂರು ನೀಡಿದ್ದರು.

ಎರಡನೇ ಕಂತಿನಲ್ಲಿ ಐದು ಸಾವಿರ ರೂಪಾಯಿ ಪಡೆಯುವಾಗ ಫರೀದಾ ಬಾನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌.ಪಿ ಉಮೇಶ್‌, ಡಿವೈಎಸ್‌ಪಿ ಚೈತ್ರ, ಇನ್‌ಸ್ಪೆಕ್ಟರ್‌ಗಳಾದ ಯಶವಂತಕುಮಾರ್, ಆಂಜಿನಪ್ಪ, ಸಿಬ್ಬಂದಿ ರಾಜಗೋಪಾಲ್‌, ವಾಸುದೇವನ್‌, ನಾಗವೇಣಿ, ಕೃಷ್ಣೇಗೌಡ, ದ್ಯಾವಪ್ಪ, ಪವಿತ್ರ , ಸುಬ್ರಹ್ಜಣಿ, ಬಾಲಾಜಿ, ಶ್ರೀನಿವಾಸ್, ಏಜಾಜ್‌ ಪಾಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT