ಕೋಲಾರ: ‘ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ‘ಸಿ’ ಹಾಗೂ ‘ಡಿ’ ದರ್ಜೆಯ ನೌಕರಿಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಇದೆ. ಶೇ 65ರಷ್ಟು ‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳನ್ನೂ ಕಂಪನಿಗಳು ಸ್ಥಳೀಯ ಕನ್ನಡಿಗರಿಗೆ ನೀಡಿವೆ. ಕೇಳಿದ್ದಕ್ಕಿಂತ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿವೆ. ಆದರೂ ದೂರುಗಳಿದ್ದು, ಮತ್ತಷ್ಟು ಆದ್ಯತೆ ನೀಡಲು ಒತ್ತಡ ಹಾಕುತ್ತೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ₹ 315 ಕೋಟಿ ವೆಚ್ಚದಲ್ಲಿ ಜರ್ಮನಿಯ ಕ್ರೋನ್ಸ್ ಕಂಪನಿ ಕೈಗೆತ್ತಿಕೊಂಡಿರುವ ಬಾಟ್ಲಿಂಗ್ ಯಂತ್ರಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೌಶಲ ಹಾಗೂ ಮೆರಿಟ್ ಆಧಾರದ ಮೇಲೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತು ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ಅಂಥವರಿಗೆ ತರಬೇತಿ ಕೂಡ ನೀಡಲಾಗುವುದು. ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಲು ಆದ್ಯತೆ ನೀಡಲಾಗುವುದು’ ಎಂದರು.

‘ತಂತ್ರಜ್ಞಾನದಲ್ಲಿ ಪ್ರಗತಿ ಆಗುತ್ತಿರುವ ಈ ಕಾಲಘಟ್ಟದಲ್ಲಿ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನೂ ಕಡಿತ ಮಾಡುತ್ತಿವೆ. ಹೀಗಾಗಿ, ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡುತ್ತಿದ್ದೇವೆ’ ಎಂದು ಹೇಳಿದರು.

‘ಹೂಡಿಕೆ ಎಂಬುದು ಬರೀ ಕಾಗದದ ಮೇಲೆ ಆಗಬಾರದು. ನಾವು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗುರಿ ಇಟ್ಟುಕೊಂಡಿದ್ದರಲ್ಲಿ ಶೇ 70ರಷ್ಟಾದರೂ ಸಾಧನೆ ಆಗಬೇಕು. ₹ 10 ಲಕ್ಷ ಕೋಟಿ ಹೂಡಿಕೆ ಗುರಿಯಲ್ಲಿ ಕನಿಷ್ಠ ₹ 7 ಲಕ್ಷ ಕೋಟಿಯಾದರೂ ಹೂಡಿಕೆ ಆಗಬೇಕು, ಆರು ಲಕ್ಷ ಉದ್ಯೋಗ ಗುರಿಯಲ್ಲಿ ಕನಿಷ್ಠ 4ಲಕ್ಷ ಉದ್ಯೋಗವಾದರೂ ಸೃಷ್ಟಿಯಾಗಬೇಕು’ ಎಂದರು.

‘ಸಮಾವೇಶದಲ್ಲಿ ಒಪ್ಪಂದವಾಗಿರುವ ಪೈಕಿ ಶೇ 70ರಷ್ಟು ಹೂಡಿಕೆ ಬೆಂಗಳೂರಿನಿಂದ ಹೊರಗಡೆ ಆಗಲಿದೆ’ ಎಂದು ಹೇಳಿದರು.

‘ಹೂಡಿಕೆದಾರರ ಸಮಾವೇಶ ಮುಗಿದಿದೆ. ಹೊಸ ಆಯಾಮ ತಿಳಿಸಲು ಮುಂದೆ ಹೂಡಿಕೆದಾರರಿಗೆ ಎರಡು ದಿನ ಬ್ರೇನ್ ಸ್ಟಾರ್ಮಿಂಗ್ ಸೆಷನ್ಸ್ ಕೂಡ ನಡೆಸಲಾಗುವುದು. ಯಾವ ರೀತಿ ಮುನ್ನಡೆಯಬೇಕು ಎಂಬುದನ್ನು ಇದರಲ್ಲಿ ತಿಳಿಸಲಾಗುವುದು, ರೋಡ್ ಮ್ಯಾಪ್ ಸಿದ್ಧಪಡಿಸಲಾಗುವುದು’ ಎಂದರು.

Highlights - ಸಿ, ಡಿ ದರ್ಜೆ ಹುದ್ದೆ ಮಾತ್ರ ನೀಡಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತಷ್ಟು ಆದ್ಯತೆ ನೀಡಲು ಒತ್ತು ಶೇ 70ರಷ್ಟು ಹೂಡಿಕೆ ಬೆಂಗಳೂರಿನಿಂದ ಹೊರಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.