ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾ‍ಪಾಡಿ: ಜನರಿಗೆ ಸಲಹೆ

Last Updated 25 ಮಾರ್ಚ್ 2022, 2:51 IST
ಅಕ್ಷರ ಗಾತ್ರ

ಮಾಲೂರು: ಪುರಸಭೆಯಿಂದ ಕರೆಯಲಾಗಿದ್ದ 2022-23ನೇ ಸಾಲಿನ ವಾರ್ಷಿಕ ಬಹಿರಂಗ ಹರಾಜಿನಲ್ಲಿ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮೊತ್ತದ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಪುರಸಭಾ ಮುಖ್ಯಾಧಿಕಾರಿ ನಜೀರ್ ಅಹಮದ್ ತಿಳಿಸಿದರು.

ಪಟ್ಟಣದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದ ಆವರಣದಲ್ಲಿ ಪುರಸಭೆಯಿಂದ ನಡೆದ ಸುಂಕ ವಸೂಲಾತಿ, ಬಸ್ ಸುಂಕ, ಹಳೆಯ ದಿನಪತ್ರಿಕೆಗಳು, ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳು, ಹಳೆಯ ನೀರಿನ ಪೈಪುಗಳು, ಹುಣಸೆ ಮರದ ಫಸಲು ಕಟಾವು, ಶೌಚಾಲಯಗಳ ಹರಾಜು ಹಕ್ಕು ಪ್ರಕ್ರಿಯೆ ಬಳಿಕ ಅವರು ಮಾತನಾಡಿದರು.

ಹರಾಜು ಪ್ರಕ್ರಿಯೆಯಲ್ಲಿ ದಿನವಹಿ ಮಾರುಕಟ್ಟೆಗೆ ₹ 16 ಲಕ್ಷ, ಬಸ್ ವಸೂಲಾತಿ ಸುಂಕ ₹ 1.65 ಲಕ್ಷ, ಹಳೆಯ ದಿನಪತ್ರಿಕೆಗಳಿಗೆ ₹ 650, ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಿಗೆ₹ 3,500, ಹಳೆಯ ನೀರಿನ ಪೈಪುಗಳಿಗೆ ₹ 1.23 ಲಕ್ಷ, ಹುಣಸೆ ಮರದ ಫಸಲಿಗೆ ₹ 750, ಬಾಲಾಜಿ ಚಿತ್ರಮಂದಿರದ ಬಳಿ ಇರುವ ಶೌಚಾಲಯಕ್ಕೆ ₹ 2.60 ಲಕ್ಷ, ಪುರಸಭೆ ಬಳಿ ಇರುವ ಶೌಚಾಲಯಕ್ಕೆ ₹ 30 ಸಾವಿರ, ತಾಲ್ಲೂಕು ಕಚೇರಿ ಬಳಿ ಇರುವ ಶೌಚಾಲಯವು ₹ 31 ಸಾವಿರಕ್ಕೆ ಹರಾಜಾಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮೊತ್ತದ ಹರಾಜು ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಪಟ್ಟಣದ ವಾಸಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಟ್ಟಣವನ್ನು ಸುಂದರ ನಗರವಾಗಿಸಲು ಸಹಕಾರ ನೀಡಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಪುರಸಭೆಯ ಕಸದ ವಾಹನವು ಬೀದಿಗೆ ಬಂದಾಗ ನೀಡಬೇಕು ಎಂದರು.

ಪುರಸಭೆ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ಭಾರತಮ್ಮ ಶಂಕರಪ್ಪ, ಎ. ರಾಜಪ್ಪ, ಸಿ.ಬಿ. ಭಾನುತೇಜ, ಸಿಎಒ ಸಿ.ಡಿ. ಮಂಜುನಾಥ, ಕಂದಾಯ ಅಧಿಕಾರಿ ರೇಣುಕಾ, ಸಮುದಾಯ ಸಂಘಟಕ ಬಿ.ಆರ್. ಶ್ರೀನಿವಾಸ್, ಆರೋಗ್ಯ ನಿರೀಕ್ಷಕರಾದ ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT