ಕಾರ್ಖಾನೆಗಳ ಮಾಲೀಕರಿಗೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ. ಮೂರ್‍ನಾಲ್ಕು ತಿಂಗಳಿಗೊಮ್ಮೆ ಕೊಳವೆ ಬಾವಿಗಳಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕುಡಿಯುವ ನೀರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ.
ರಮೇಶ್, ನೊಸಗೆರೆ ಗ್ರಾ.ಪಂ ಪಿಡಿಒ
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿಕೊಂಡು, ಚರಂಡಿ ನೀರಿನ ಜೊತೆ ಸೇರಿ ಮನೆಗಳಿಗೆ ನುಗ್ಗುತ್ತದೆ. ಹಳ್ಳದಲ್ಲಿ ನೀರು ಖಾಲಿಯಾಗುವರೆಗೂ ಮನೆಗಳಿಗೆ ರಸ್ತೆ ಸೌಕರ್ಯ ಇಲ್ಲದಂತಾಗುತ್ತದೆ. ಬದುಕು ದುಸ್ಥರವಾಗಿದೆ
ನಾರಾಯಣಪ್ಪ, ಉಪವಾಸಪುರ ನಿವಾಸಿ
ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯ ಅಂತರ್ಜಲವನ್ನೂ ಕಲುಷಿತಗೊಳಿಸಿದೆ. ಕೊಳವೆ ಬಾವಿಯಲ್ಲಿನ ನೀರು ಸಹ ಕಲುಷಿತವಾಗಿದೆ. ಕೆರೆಯ ಬಳಿ ಇರುವ ಖಾಸಗಿ ಕೊಳವೆ ಬಾವಿಗಳಿಂದ ಬೆಳೆಗಳಿಗೆ ನೀರನ್ನು ಹರಿಸುತ್ತಿದ್ದು, ಬೆಳೆಗಳು ಸಹ ಕೈಗೆಟುಕುತ್ತಿಲ್ಲ
ವೆಂಕಟೇಶಪ್ಪ, ಗ್ರಾಮದ ರೈತ
ಕೊಳವೆ ಬಾವಿಯಲ್ಲಿನ ಕಲುಷಿತ ನೀರು ಕುಡಿಯುವುದರಿಂದ ಗ್ರಾಮದಲ್ಲಿನ ಬಹತೇಕರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪಂಚಾಯಿತಿಯಿಂದ ಅನುದಾನ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುವುದು.
ರತ್ನಮ್ಮ ನಾರಾಯಣಪ್ಪ, ಗ್ರಾ.ಪಂ.ಸದಸ್ಯೆ
ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದ್ದು ದುರ್ವಾಸನೆ ಬೀರುತ್ತಿದೆ