ಕೋಲಾರ: ನಗರದ ಕಾರಂಜಿಕಟ್ಟೆಯ ದ್ರೌಪತಾಂಭ ಕರಗ ದೇವಸ್ಥಾನದ ಹಿಂದಿರುವ ರಘು ಎಂಬುವರು ಮನೆಯೊಂದರ ಆವರಣದಲ್ಲಿ ಸುಮಾರು 8 ಕೆ.ಜಿ ತೂಕದ ಉಡವೊಂದು ಕಾಣಿಸಿಕೊಂಡಿತು.

ಸ್ನೇಕ್ ರವಿ ಅವರು ಆ ಉಡವನ್ನು ರಕ್ಷಣೆ ಮಾಡಿ ಅಂತರಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಟ್ಟರು. ಯಾರೋ ಉಡವನ್ನು ಮಾಂಸಕ್ಕಾಗಿ ತಂದಿಟ್ಟಿದ್ದು ಅದು ತಪ್ಪಿಸಿಕೊಂಡು ಬಂದಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಅಂತರಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾಡುಹಂದಿ, ನವಿಲು, ಮೊಲ ಸೇರಿದಂತೆ ಚಿಕ್ಕ ಪ್ರಾಣಿಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಸ್ನೇಕ್ ರವಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.