ಮಾಲೂರು: ತಾಲೂಕಿನಲ್ಲಿ ತುಂಬ ಜನ ಗಂಡಸರಿದ್ದಿವಿ. ಇಲ್ಲಿನ ಎಲ್ಲಾ ಪಾರ್ಟಿಗಳಲ್ಲಿ ಇದ್ದಿವಿ. ಎಲ್ಲಾ ಜಾತಿಗಳಲ್ಲಿ ಇದ್ದಿವಿ. ತಾಲೂಕಿನಲ್ಲಿ ಹುಟ್ಟಿರುವ ಗಂಡಸು ಮಾತ್ರ ಶಾಸಕನಾಗಿ ಬರಬೇಕು ಎಂದು ಶಾಸಕ ಕೆವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ತಾಲೂಕು ಕಾಂಗ್ರೆಸ್ ಹಾಗೂ ನಂಜೇಗೌಡ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಶಾಸಕ ಕೆವೈ.ನಂಜೇಗೌಡರ ಜನ್ಮ ದಿನಾಚರಣೆ ಅಂಗವಾಗಿ ೨೦೨೫ ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನಿಂದ ಯಾಮರಿಸುವವರು ಬಂದರು. ಹೆಣ್ಣು ಮಕ್ಕಳನ್ನು ಯಾಮಾರಿಸಿ ಮತ ಹಾಕಿಸಿಕೊಂಡು ನನ್ನ ಬಗ್ಗೆ ಮಾತನಾಡುತ್ತಾರೆ. ಕಡಿಮೆ ಮತಗಳಲ್ಲಿ ಗೆದ್ದಿದ್ದೆನೇ ಎಂದು ಹಿನಾಯವಾಗಿ ಮಾತನಾಡುತ್ತಾರೆ. ಮಾಲೂರಿನಲ್ಲಿರುವ ಸ್ಥಳಿಯರು ಮಾತನಾಡಿದರೇ ನಾನು ಮಾತನಾಡುತ್ತೇನೆ. ಹೂಡಿ ಯಿಂದ ಬಂದವರುಹಾಗೂ ಹೊಸಕೋಟೆ ಯಿಂದ ಬಂದವರು ನನ್ನ ಬಗ್ಗೆ ಟೀಕೆ ಮಾಡಿದರೇ ನಾನೇಕೆ ತಲೆಕೆಡಿಸಿಕೊಳ್ಳಬೇಕು. ನಾನು ಹೂಡಿಯವನಲ್ಲ. ಅಥವಾ ಹೊಕೋಟೆ ಅವನು ನಾನಲ್ಲ. ಇಲ್ಲಿನ ಸ್ಥಳಿಕರು ವಿರೋಧ ಪಕ್ಷದವರು ನನ್ನ ಬಗ್ಗೆ ಟೀಕೆ ಮಾಡಿದರೇ ಮಾತ್ರ ಅವರಿಗೆ ಉತ್ತರ ಕೋಡುತ್ತೇನೆ ಎಂದರು. ನನ್ನ ತಪ್ಪುಗಳಿದ್ದೇ ಸರಿಪಡಿಸಿಕೊಳ್ಳೂತ್ತೇನೆ. ಆದರೇ ಇವರು ಯಾರು. ಒಮ್ಮೆ ಯಾಮಾರಿ ಹೊಸಕೋಟೆ ಅವರನ್ನು ಕರೆದುಕೊಂಡು ಬಂದು ತಪ್ಪು ಮಾಡಿದೇವು. ಅದನ್ನು ಸರಿಪಡಿಸಿಕೊಳ್ಳಲು ಎರಡೂವರೆ ವರ್ಷ ಹಿಡಿಯಿತು. ಅದರಿಂದ ಇನ್ನು ಮುಂದೆ ತಾಲೂಕಿನವರೇ ಶಾಸಕರಾಗಬೇಕು. ಇದಕ್ಕೆ ಎಲ್ಲಾ ನಾಗರಿಕರು ಸಹಕಾರ ನೀಡಬೇಕು ಎಂದರು.
ಗ್ರಾಮದ ಹಿರಿಯರಿಯರು ಶಾಸಕರಾಗುವುದಾಗಿ ಭವಿಷ್ಯ ನುಡಿದಿದ್ದರು. ರಾಜಕೀಯಕ್ಕೆ ೧೯೮೬ ರಲ್ಲಿ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಕೊಮ್ಮನಹಳ್ಳಿ ಗ್ರಾಮದ ಹಿರಿಯರು ನೀನು ಎಂಲ್ ಎ ಆಗ್ತಿಯ ಎಂದು ಹೇಳುತ್ತಿದ್ದರು. ಅವರ ಮಾತು ಕೇಳಿ ನನಗೆ ನಗು ಬರುತ್ತಿತ್ತು. ಕಾರಣ ನಾನು ಎಂಎಲ್ ಎ ಆಗ್ತಿನಾ ಎಂಬ ನಂಬಿಕೆ ನನಗೆ ಇರಲಿಲ್ಲ. ಮೊದಲನೇ ಬಾರಿ ಶಾಸಕನಾಗಿ ಆಯ್ಕೆ ಯಾದ ನಂತರ ನೇರವಾಗಿ ಗ್ರಾಮದ ಹಿರಿಯ ಬಳಿ ಹೋಗಿ ಅವರ ಕಾಲಿಗೆ ಬಿದ್ದು ಆರ್ಶಿವಾದ ಪಡೆದೆ ಎಂದು ತಿಳಿಸದರು.
ತಂದೆಯನ್ನು ನೆನೆದುಬಾವುಕರಾದ ನಂಜೇಗೌಡ- ನನ್ನನ್ನು ಶಾಸಕಾನಾಗಿ ನೋಡಬೇಂಬ ನನ್ನ ತಂದೆ ಆಸೆ ಪಟ್ಟಿದ್ದರು. ನಮ್ಮ ಬಳಿ ಹಣ ಇರಲಿಲ್ಲ. ನಮ್ಮ ತಂದೆಯವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಾನು ನೋಡಲು ಹೋಗಿದ್ದ ಸಂದರ್ಭದಲ್ಲಿ ಎಂಎಲ್ ಎ ಆಗಬೇಕೆಂದು ಹೇಳಿದರು. ದುಡ್ಡು ಇಲ್ಲಪ್ಪ ಅಂತ ಹೇಳಿದೆ. ಲೋ ಮಗನೇ ತೆಂಗಿನ ತೋಪು ಮಾರಾಕು. ನೀನು ಎಂಎಲ್ ಎ ಆಗಬೇಕು ಅಂದರು. ಆದರೇ ನಾನು ಎಂ ಎಲ್ ಎ ಅಗುವಷ್ಟರಲ್ಲಿ ಅವರು ನಮ್ಮನ್ನ ಅಗಲಿದ್ದರು ಎಂದು ಕಣ್ಣಲ್ಲಿ ನೀರು ಹಾಕಿಕೊಂಡರು.

ಮೊದಲನೇ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿಲ್ಲ. ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದ ನಂತರ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಸುಮಾರು $2200 ಕೋಟಿ ಅನುದಾನ ತರಲಾಗಿದೆ. ರಾಜ್ಯ ಸರ್ಕಾರ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದು ಒಂದು ವರ್ಷಕ್ಕೆ $60 ಸಾವಿರ ಕೋಟಿ ಖರ್ಚುಮಾಡಲಾಗುತ್ತಿದೆ ಜೊತೆಗೆ ಪಟ್ಟಣದಲ್ಲಿ $21 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ, 35 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಪಟ್ಟಣದಲ್ಲಿ$ 300 ಕೋಟಿ ವೆಚ್ಚದಲ್ಲಿ ಮೂರುವರೆ ಕಿಮೀ ಉದ್ದದ ಪ್ಲೈಹೊವರ್ ನಿರ್ಮಾಣ, ಮುಖ್ಯವಾಗಿ ರಾಜ್ಯದಲ್ಲೇ ಮಾಲೂರು ಪುರಸಭೆಯನ್ನು ಇತ್ತಿಚೆಗೆ ನಗರಸಭೆಯನ್ನಾಗಿ ಸರ್ಕಾರ ಘೋಷಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿಯಿಂದ ಹೋಪನ್ ಜೀಪ್ ನಲ್ಲಿ ಸಾಂಸ್ಕೃತಿ ಕಲಾ ತಂಡಗಳೊಂದಿಗೆ ಶಾಸಕ ಕೆವೈ.ನಂಜೇಗೌಡ ಹಾಗೂ ಪತ್ನಿ ರತ್ನಮ್ಮ ನಂಜೇಗೌಡ ರನ್ನು ಮೆರವಣಿಗೆ ಮೂಲಕ ಕರೆತಂದರು. ಆಭಿಮಾನಿಗಳು ಸೇಬು ಹಾರ ಹಾಕಿ ಪುಷ್ಪಗಳನ್ನು ಚೆಲ್ಲಿದರು.

ಮಾಜಿ ಶಾಸಕ ಎ.ನಾಗರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶೀ ಸುನೀಲ್ ನಂಜೇಗೌಡ, ಪುರಸಭಾಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜಪ್ಪ, ಸೇರಿದಂತೆ ಕಾಂಗ್ರೆಸ್ ಪುರಸಭಾಸದಸ್ಯರು, ನಗರ ಪ್ರಾಧಿಕಾರದ ಅಧ್ಯಕ್ಷ ಆಹಮದ್ ನಯುಂ ಉಲ್ಲಾ, ಕೆಪಿಸಿಸಿ ಸದಸ್ಯರಾದ ಅಂಜಿನಿಸೋಮಣ್ಣ, ಪ್ರದೀಪ್ ರೆಡ್ಡಿ, ದಾರ್ಕಾಸು ಸಮಿತಿ ಅಧ್ಯಕ್ಷರಾದ ಸಂತೇಹಳ್ಳಿ ನಾರಾಯಣಸ್ವಾಮಿ, ಹನುಮಂತಪ್ಪ, ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಮದುಸೂದನ್, ವಿಜಯ ನಾರಸಿಂಹ, ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷ ಆಂಜಿನಪ್ಪ, ಮುಖಂಡರಾದ ಕ್ಷೇತ್ರನಹಳ್ಳಿ ವೆಂಕಟೇಶ್, ತಿರುಮಲಟ್ಟಿ ಬಾಬು, ದಿನ್ನಹಳ್ಳಿ ರಮೇಶ್, ಬಾಳಿಗಾನಹಳ್ಳಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.