ಮುಳಬಾಗಿಲು: ಭತ್ತದ ಗದ್ದೆ ನಾಟಿ ಮಾಡಲೆಂದು ಬೆಳೆಸಲಾಗಿದ್ದ ಭತ್ತದ ಪೈರಿಗೆ ದುಷ್ಕರ್ಮಿಗಳು ಕಸದ ಔಷಧ ಸಿಂಪಡಿಸಿ ಪೈರು ನಾಶ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಮುಳಬಾಗಿಲು ತಾಲ್ಲೂಕಿನ ವಾನಿಗಾನಹಳ್ಳಿ ಗ್ರಾಮದ ನಾಗರಾಜ ಎಂಬುವವರು ತಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡಲು ಪೈರು ಬೆಳೆಸಿದ್ದರು. ಸೋಮವಾರ ನಾಟಿ ಮಾಡಲೆಂದು ಭತ್ತದ ಕೆಸರು ಗದ್ದೆಯನ್ನು ತಯಾರು ಮಾಡಿದ್ದರು. ಆದರೆ, ಇದನ್ನು ಸಹಿಸದ ಯಾರೊ ದುಷ್ಕರ್ಮಿಗಳು ಶನಿವಾರ ರಾತ್ರಿ ಭತ್ತದ ಪೈರಿಗೆ ಕಸದ ಔಷಧ ಸಿಂಪಡಿಸಿದ್ದಾರೆ. ಇದರಿಂದ ಪೈರು ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ನಾಲ್ಕು ಎಕರೆ ಗದ್ದೆಯನ್ನು ಸುಮಾರು ಟ್ರಾಕ್ಟರ್ ಹಾಗೂ ನೇಗಿಲಿನಿಂದ ಹಸನು ಮಾಡಿ, ಕಾರ್ಮಿಕರನ್ನು ಸಹ ನಿಗದಿ ಮಾಡಲಾಗಿತ್ತು. ಪೈರನ್ನು 15 ಗುಂಟೆ ಜಮೀನಿನಲ್ಲಿ 40 ದಿನಗಳಿಂದ ಬೆಳೆಸಲಾಗಿತ್ತು. ಪೈರು ಹಸನಾಗಿ ಬೆಳೆದಿತ್ತು. ಆದರೆ, ಪೈರು ನಾಶಪಡಿಸಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಈ ಸಂಬಂಧ ಕೃಷಿ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು ಎಂದು ರೈತ ನಾಗರಾಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.