ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು | ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

Published 26 ನವೆಂಬರ್ 2023, 13:27 IST
Last Updated 26 ನವೆಂಬರ್ 2023, 13:27 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಮಿಣಜೇನಹಳ್ಳಿಯ ಬಳಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಮಿಣಜೇನಹಳ್ಳಿ ಗ್ರಾಮದ ಮಂಜುನಾಥ್ ( 48 ) ಕೊಲೆಯಾದವರು. ಮೃತರು ಶನಿವಾರ ಬಂಗಾರಪೇಟೆ ಕಡೆಯಿಂದ ಮಿಣಜೇನಹಳ್ಳಿಗೆ  ದ್ವಿಚಕ್ರ ವಾಹನದಲ್ಲಿ ಬರುವಾಗ ಘಟನೆ ನಡೆದಿದ್ದು, ಹಣದ ವಿಚಾರ ಅಥವಾ ಪತ್ನಿಯ ಅನೈತಿಕ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಸಂಬಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ಮಂಜುನಾಥ್ ಅವರಿಗೆ ಇಬ್ಬರು ಪತ್ನಿಯರಿದ್ದು , ಮೊದಲ ಪತ್ನಿ ಸೌಭಾಗ್ಯಮ್ಮ ಎಂಬುವವರನ್ನು ಬಿಟ್ಟು, ಮಿಣಜೇನಹಳ್ಳಿಯ ನೇತ್ರಾ ಎಂಬುವವರನ್ನು ಎರಡನೇ ಮದುವೆಯಾಗಿ ಅಲ್ಲಿಯೇ ವಾಸವಾಗಿದ್ದರು. ಶನಿವಾರ ಮಿಣಜೇನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಬರುವಾಗ ಬಂಗಾರಪೇಟೆ ತಾಲ್ಲೂಕಿನ ಮಾದ ಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಮೃತನ ಸಂಬಧಿಕರು ಆರೋಪಿಸಿದ್ದಾರೆ.

ಮೃತ ಮಂಜುನಾಥ್ ಹಾಗೂ ಕೊಲೆ ಮಾಡಿರುವ ಶ್ರೀನಿವಾಸ್ ಇಬ್ಬರ ನಡುವೆ ₹ 40 ಸಾವಿರ ಹಣದ ವಿಚಾರಕ್ಕಾಗಿ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಹೀಗಾಗಿ ಶ್ರೀನಿವಾಸ್ ಕೊಲೆ ಮಾಡಿದ್ದಾನೆ ಎಂದು ಮೃತನ ಮಾವ ನಾಗರಾಜ್ ಆರೋಪಿಸಿದ್ದಾರೆ.

ಮೃತರ ಎರಡನೇ ಪತ್ನಿ ನೇತ್ರಾಗೆ ಅನೈತಿಕ ಸಂಬಂಧದ ಇದ್ದು, ತನ್ನ ಪ್ರಿಯಕರನ ಜೊತೆ ಸೇರಿ ನೇತ್ರಾಳೆ ಕೊಲೆ ಮಾಡಿಸಿದ್ದಾಳೆ ಎಂದು ಮೃತರ ಮೊದಲ ಪತ್ನಿ ಸೌಭಾಗ್ಯಮ್ಮ ಆರೋಪಿಸಿದರು.

ಕೊಲೆ ಮಾಡಿರುವ ಆರೋಪಿ ಶ್ರೀನಿವಾಸನನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT