ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಲ್ ಅಧಿಕಾರಿಗಳ ನೇಮಕ : ಕೋಲಾರ ಪ್ರಭಾರ ಡಿಸಿ

Last Updated 26 ಫೆಬ್ರುವರಿ 2020, 13:25 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ 75 ಮಂದಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪ್ರೌಢ ಶಾಲೆಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ’ ಎಂದು ಪ್ರಭಾರ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಚಿತ್ರಮಿತ್ರ’ ಚಿತ್ರ ಬಿಡಿಸು ಅಂಕ ಗಳಿಸು ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ‘ನೋಡಲ್‌ ಅಧಿಕಾರಿಗಳು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಮಾರ್ಗದರ್ಶನ ನೀಡಿ ಆತ್ಮಸ್ಥೈರ್ಯ ತುಂಬುತ್ತಾರೆ. ಮಕ್ಕಳಿಗೆ 1 ಗಂಟೆ ಪ್ರೇರಣೆಯ ರೀತಿ ಇವರು ಮಾತನಾಡಿ ಧೈರ್ಯ ತುಂಬಲಿದ್ದಾರೆ’ ಎಂದರು.

‘ಪರೀಕ್ಷೆಯಲ್ಲಿ ಮಕ್ಕಳಿಗೆ ನಕಲು ಮಾಡಲು ಅವಕಾಶ ಕೊಡಬೇಡಿ. ಅದು ಅವರನ್ನು ಅನೈತಿಕತೆಯೆಡೆಗೆ ಹೋಗಲು ಪ್ರೇರೇಪಿಸುತ್ತದೆ. ಮಕ್ಕಳಿಗೆ ಕಲಿಸುವ ಪಾಠದಲ್ಲಿ ನೈತಿಕ ಮೌಲ್ಯಗಳಿರಲಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರ ಮುಖ್ಯವಲ್ಲ. ಜಿಲ್ಲೆಯಲ್ಲಿ ತೇರ್ಗಡೆಗೆ ಅನೈತಿಕ ಮಾರ್ಗದತ್ತ ಸಾಗುವುದು ನಡೆಯಬಾರದು. ಮಕ್ಕಳು ಉತ್ತೀರ್ಣರಾಗದಿದ್ದರೂ ಪರವಾಗಿಲ್ಲ. ಜಿಲ್ಲೆ ಬಗ್ಗೆ ಒಳ್ಳೆಯ ಸಂದೇಶ ರವಾನಿಸಿ’ ಎಂದು ಸೂಚಿಸಿದರು.

‘ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹೊರ ತಂದಿರುವ ಚಿತ್ರಮಿತ್ರ ಕಿರುಹೊತ್ತಿಗೆ ಅದ್ಭುತವಾಗಿದ್ದು, ಇದು ಮಕ್ಕಳ ಸಾಧನೆಗೆ ದಾರಿ ತೋರಲಿದೆ. ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್‌ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ. ಬಿಪಿಎಲ್‌ ಪಡಿತರದಾರರಿಗೆ ₹ 5 ಲಕ್ಷ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ವೈದ್ಯಕೀಯ ವೆಚ್ಚದ ಶೇ 30ರಷ್ಟನ್ನು ಸರ್ಕಾರ ತುಂಬುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT