ಶ್ರೀನಿವಾಸಪುರ: ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ಪ್ರಕರಣವನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಬಂದ್ ನಡೆಸಲಾಯಿತು.

‘ನಮಗೆ ಸಂವಿಧಾನವೇ ಜೀವನಾಡಿ. ದೇಶದಲ್ಲಿನ ಎಲ್ಲಾ ಸಮುದಾಯಗಳಿಗೆ ಒಂದೇ ಸಮಾನವಾದ ಹಕ್ಕು ಮತ್ತು ಕರ್ತವ್ಯ ನೀಡಿದೆ. ಕೆಲವರು ಹುನ್ನಾರ ನಡೆಸಿ ದೇಶದಲ್ಲಿನ ಜನರ ಮಧ್ಯೆ ಬಿರುಕು ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ’ ಎಂದು ದಲಿತ ಸಂಘಟನೆ ರಾಜ್ಯ ಮುಖಂಡ ಎನ್.ಮುನಿಸಸ್ವಾಮಿ ಹೇಳಿದರು.

ಶೂ ಎಸೆದಿರುವ ವಕೀಲನ ಮೇಲೆ ಯಾವುದೇ ರೀತಿಯಾದ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಿಎಲ್ಡಿ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ, ‘ದೇಶದ ಪವಿತ್ರವಾದ ಗ್ರಂಥವಾದ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸಂವಿಧಾನ ಉಳಿಯಬೇಕು, ಇದರೊಂದಿಗೆ ದೇಶವೂ ಉಳಿಯಬೇಕು. ಸಮಾಜವು ಉಳಿಯಬೇಕು. ಸಂವಿಧಾನ ಅಳಿಸಲು, ಸಮಾಜವನ್ನು ಅಳಿಸಲು ಬಿಡುವುದಿಲ್ಲ. ದೇಶ ನಾಶ ಆಗಲು ಬಿಡುವುದಿಲ್ಲ. ದೇಶ ಉಳಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕೆಪಿಆರ್ಎಸ್ ಜಿಲ್ಲಾ ಸಂಚಾಲಕ ಪಾತಕೋಟೆ ನವೀನ್ಕುಮಾರ್ ಮಾತನಾಡಿ, ‘ಸುಪ್ರೀಂ ಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದು ಖಂಡನೀಯ. ಕೇವಲ ನ್ಯಾಯಮೂರ್ತಿ ಮೇಲೆ ಅಲ್ಲ; ದೇಶದ ಜನತೆಯ ಮೇಲೆ. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ದೇಶದ ಏಕತೆ, ಸಮಗ್ರತೆ ಉಳಿಸಬೇಕು. ನಮ್ಮ ಸಂವಿಧಾನ ಹಾಗೂ ದೇಶವನ್ನು ರಕ್ಷಣೆ ಮಾಡಿಕೊಳ್ಳಬೇಕು’ ಎಂದರು.

ಶೂ ಎಸೆದಿರುವ ವಕೀಲನ ಮೇಲೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಳಿಗ್ಗೆ ಬಂದ್ ಪ್ರಕ್ರಿಯೆಯು ಪ್ರಾರಂಭವಾಯಿತು. ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂತು . ಸರ್ಕಾರ ಕಚೇರಿಗಳು, ಸಾರ್ವಜನಿಕ ಆಸ್ಪತ್ರೆ ಕಾರ್ಯ ನಿರ್ವಹಿಸಿದವು. ಸರ್ಕಾರಿ ಶಾಲಾ ಕಾಲೇಜುಗಳು, ಅಂಗಡಿಗಳು ಮುಚ್ಚಿದ್ದವು. ಬೆಳಿಗ್ಗೆ ಬಸ್ಗಳು ಇಲ್ಲದೆ ಬೇರೆ ನಗರ ಪ್ರದೇಶಗಳಿಗೆ ಹೋಗುವ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡಿದರು.

ಮಧ್ಯಾಹ್ನ 2 ಗಂಟೆಯಲ್ಲಿ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ರವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಲು ಮನವಿ ಪತ್ರ ಸಲ್ಲಿಸಿರು. ನಂತರ ಬಸ್ ಸಂಚಾರ ಪ್ರಾರಂಭವಾಯಿತು.

ಪುರಸಭೆ ಅಧ್ಯಕ್ಷ ಬಿ.ಆರ್.ಬಾಸ್ಕರ್, ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ರಾಜ್ಯ ಉಪಾಧ್ಯಕ್ಷ ವಿ. ಬದ್ರಿ ನರಸಿಂಹ, ಕಲ್ಲೂರು ವೆಂಕಟೇಶ್, ಪುರಸಭೆ ಸದಸ್ಯ ಸಂಜಯ್ಸಿಂಗ್, ನಾಮಿನಿ ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್ಕುಮಾರ್, ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ರಾಷ್ಟ್ರೀಯ ಮಾನವ ಹಕ್ಕುಗಳ ಜಾಗೃತಿ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಕೆ.ಎಲ್.ಕಾರ್ತಿಕ್, ವಿವಿಧ ಸಂಘಟನೆ ಮುಖಂಡರಾದ ಕೆ.ಮೋಹನಾಚಾರಿ, ಪಾತಕೋಟೆ ನವೀನ್ಕುಮಾರ್, ಉಪರಪ್ಪಪಲ್ಲಿ ತಿಮ್ಮಯ್ಯ, ಚಲ್ದಿಗಾನಹಳ್ಳಿ ಸಿ.ವಿ.ಮುನಿವೆಂಕಟಪ್ಪ, ಮುಳಿಬಾಗಿಲುಪ್ಪ, ವಿ.ಮುನಿಯಪ್ಪ, ನಾಗದೇನಹಳ್ಳಿ ಶ್ರೀನಿವಾಸ್ ,ವಾಸು, ಕೂಸ್ಸಂದ್ರ ರೆಡ್ಡಪ್ಪ, ಚಲ್ಡಿಗಾನಹಳ್ಳಿ ಪ್ರಭಾಕರಗೌಡ, ಅಬ್ದುಲ್ಫಾರುಕ್, ಬೈರಾರೆಡ್ಡಿ, ಕೆ.ಎಲ್.ಕಾರ್ತಿಕ್, ಸಾಧಿಕ್ಅಹ್ಮದ್, ಅಡವಿ ಚಮಗೂರು ಸದಾಶಿವ, ವೆಂಕಟ್, ಸಿ.ಮುನಿಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.