ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿಗೆ ಪಾರದರ್ಶಕ ಮಾಹಿತಿ ನೀಡಿ

Last Updated 25 ಫೆಬ್ರುವರಿ 2020, 14:02 IST
ಅಕ್ಷರ ಗಾತ್ರ

ಕೋಲಾರ: ‘2021ರ ಜನಗಣತಿಗೆ ಪಾರದರ್ಶಕ ಮಾಹಿತಿ ನೀಡಿ’ ಎಂದು ಜಿಲ್ಲಾ ಚುನಾವಣಾ ಶಾಖೆ ನೋಡಲ್ ಅಧಿಕಾರಿ ಎ.ಜಿ.ಪಂಕಜಾ ತಿಳಿಸಿದರು.

ಜಿಲ್ಲೆ, ತಾಲ್ಲೂಕು, ನಗರ ಹಾಗೂ ಪಟ್ಟಣ ಪ್ರದೇಶದ ಜನಗಣತಿ ಅಧಿಕಾರಿಗಳಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಏ.15ರಿಂದ ಮೇ 29ರವರೆಗೆ ಒಟ್ಟು 45 ದಿನಗಳ ಕಾಲ ಜನಗಣತಿ ನಡೆಯಲಿದೆ’ ಎಂದು ಹೇಳಿದರು.

‘ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಜನಗಣತಿ ನಡೆಯುತ್ತದೆ. ಹಿಂದಿನ ಬಾರಿ ಕಾಗದದ ಮುಖಾಂತರ ಸುಮಾರು 6 ತಿಂಗಳ ಕಾಲ ಜನಗಣತಿ ನಡೆಸಲಾಗಿತ್ತು. ಆದರೆ, ಈ ಬಾರಿ ಮೊಬೈಲ್ ಆ್ಯಪ್ ಮೂಲಕ -3 ತಿಂಗಳೊಳಗೆ ಜನಗಣತಿ ಕಾರ್ಯ ಪೂರ್ಣಗೊಳಿಸುತ್ತೇವೆ. ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೋಪ್ಯವಾಗಿ ಇಡುತ್ತೇವೆ’ ಎಂದು ಮಾಹಿತಿ ನೀಡಿದರು.

‘ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ನಗರ ಮಟ್ಟದಲ್ಲಿ ಆಯುಕ್ತರು ಜನಗಣತಿ ಪ್ರಕ್ರಿಯೆಯ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಜನಗಣತಿಗೆ ಈಗಾಗಲೇ ಗಣತಿದಾರರನ್ನು ನೇಮಕ ಮಾಡಿದ್ದು, ಸದ್ಯದಲ್ಲೇ ಅವರಿಗೆ ಗುರುತಿನಚೀಟಿ ವಿತರಿಸುತ್ತೇವೆ’ ಎಂದು ವಿವರಿಸಿದರು.

ಚುನಾವಣಾ ಇಲಾಖೆ ಬೆಂಗಳೂರು ವಿಭಾಗದ ಉಪ ನಿರ್ದೇಶಕ ಚಿನ್ನದೊರೈ, ತರಬೇತುದಾರರಾದ ಮಾಜುದ್ದೀನ್‌ ಖಾನ್‌ ಮತ್ತು ಜಹೀರ್ ಅಬ್ಬಾಸ್ ಅವರು ಜನಗಣತಿ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಆರ್.ಶೋಬಿತಾ, ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT