ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ
ನಾವು ಬಾಲಕರಾಗಿದ್ದಾಗಲೇ ಪಟ್ಟಣದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ತುಡಿಯುತ್ತಿದ್ದಾರೆ. ಆಗ ಹಿರಿಯರು ಅದಕ್ಕಾಗಿ ಜಾಗ ಕೊಟ್ಟಿದ್ದರು. ನಂತರದ ದಿನಗಳಲ್ಲಿ ನಾಟಕ ಪ್ರದರ್ಶಿಸಲು ಅಂದಿನ ಪುರಸಭೆ ಅಧ್ಯಕ್ಷ ವೆಂಕಟಸ್ವಾಮಿ ಪುರಸಭೆಯ ಪಕ್ಕದ ಆವರಣದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರು. ಆಗ ನಾಗರಿಕರ ಸಹಕಾರದಿಂದ ರಂಗಮಂದಿರ ನಿರ್ಮಾಣ ಮಾಡಿದ್ದೇವು. ಅದರಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತು ಎಂದು ಸ್ಮರಿಸುತ್ತಾರೆ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಎಂವಿ.ಹನುಮಂತಪ್ಪ. ಇದೇ ಸ್ಥಳದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕೆ.ಎಸ್. ಮಂಜುನಾಥಗೌಡ ಶಾಕರಾಗಿದ್ದ ಸಂದರ್ಭ ಮುಂದಾದರು. ಆದರೆ ಕಾಮಗಾರಿ ಆರಂಭಗೊಂಡ ನಂತರ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು. ಇದರಿಂದ ಕಾಮಗಾರಿ ನೆನೆಗುದಿಗೆ ಬಿತ್ತು. ಅಂದಿನ ಪುರಭಾಧ್ಯಕ್ಷ ಸಿ.ಪಿ.ನಾಗರಾಜ್ ಅವರು ಸೌಕರ್ಯಗಳು ಇಲ್ಲದಿದ್ದರೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಂಗಮಂದಿರವನ್ನು ದಿಢೀರ್ ಆಗಿ ಉದ್ಘಾಟಿಸಿದರು. ಇಲ್ಲಿಂದಲೇ ಶುರುವಾಯಿತು ಸಮಸ್ಯೆ ಎನ್ನುತ್ತಾರೆ ಹನುಮಂತಪ್ಪ.