ಕೋಲಾರ: ವೃದ್ಧನೊಬ್ಬ ಚಾಕೊಲೇಟ್ ಕೊಡುವ ನೆಪದಲ್ಲಿ 5 ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ತಾಲ್ಲೂಕಿನ ಛತ್ರಕೋಡಿಹಳ್ಳಿಯಲ್ಲಿ ನಡೆದಿದ್ದು,ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ತಿಮ್ಮಪ್ಪನನ್ನು (60) ಬಂಧಿಸಿದ್ದಾರೆ.

ಗಾರೆ ಕೆಲಸ ಮಾಡುವ ಬಾಲಕಿಯ ಪೋಷಕರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು ಸಂತ್ರಸ್ತ ಬಾಲಕಿ ಮತ್ತು ದೊಡ್ಡ ಮಗಳನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಸಂಗತಿ ತಿಳಿದಿದ್ದ ಪಕ್ಕದ ಮನೆಯ ತಿಮ್ಮಪ್ಪ ಚಾಕೊಲೇಟ್ ಕೊಡುವುದಾಗಿ ಬಾಲಕಿಗೆ ನಂಬಿಸಿ ತನ್ನ ಮನೆಗೆ ಕರೆದೊಯ್ದು ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯ ಆರೋಗ್ಯದಲ್ಲಿ ಬುಧವಾರ ಏರುಪೇರಾಗಿತ್ತು. ಹೀಗಾಗಿ ಪೋಷಕರು ಆಕೆಯನ್ನು ಜಿಲ್ಲಾ ಕೇಂದ್ರದ ಎಸ್ಎನ್ಆರ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಅತ್ಯಾಚಾರದ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಪೋಷಕರು ದೊಡ್ಡ ಮಗಳನ್ನು ವಿಚಾರಿಸಿದಾಗ ಆಕೆ, ತಿಮ್ಮಪ್ಪ ಬಾಲಕಿಯನ್ನು ಮೂರ್ನಾಲ್ಕು ದಿನಗಳಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗಿ ಹೇಳಿದ್ದಾಳೆ ಎಂದು ತಿಳಿಸಿದ್ದಾರೆ.

ಅತ್ಯಾಚಾರದ ಸಂಗತಿಯನ್ನು ಬಹಿರಂಗಪಡಿಸದಂತೆ ತಿಮ್ಮಪ್ಪನ ಪತ್ನಿ ಮುನಿಚೌಡಮ್ಮ ಮತ್ತು ಮಗ ಕುಮಾರ್ ಸಂತ್ರಸ್ತ ಬಾಲಕಿಯ ಪೋಷಕರಿಗೆ ಬೆದರಿಕೆ ಹಾಕಿದ್ದರು. ಕುಮಾರ್, ಛತ್ರಕೋಡಿಹಳ್ಳಿ ಗ್ರಾ.ಪಂ ಸದಸ್ಯರಾಗಿದ್ದಾರೆ. ಘಟನೆ ಸಂಬಂಧ ಬಾಲಕಿಯ ತಾಯಿ ದೂರು ಕೊಟ್ಟಿದ್ದು, ಮುನಿಚೌಡಮ್ಮ ಮತ್ತು ಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಯತ್ನ: ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತಿಮ್ಮಪ್ಪನನ್ನು ಬಂಧಿಸಲಾಗಿದೆ. ಆತ ಬಂಧನಕ್ಕೂ ಮುನ್ನ ಮನೆಯಲ್ಲಿ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಎಸ್ಎನ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.