ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ಧನಸಹಾಯ: ವಿದ್ಯಾರ್ಥಿಗಳ ಪ್ರತಿಕ್ರಿಯೆ

Last Updated 7 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ಅಕ್ಷರ ದಾಸೋಹ

ಎಸ್ಸೆಸ್ಸೆಲ್ಸಿಯಲ್ಲಿ ಶೇ 90ರಷ್ಟು ಅಂಕ ಗಳಿಸಿದ ನನಗೆ ಶಿಕ್ಷಣ ಮುಂದುವರಿಸುವುದೇ ದೊಡ್ಡ ಚಿಂತೆಯಾಗಿತ್ತು. ಮನೆಯ ಆರ್ಥಿಕ ಪರಿಸ್ಥಿತಿ ನೆನೆದು ತಂದೆಯ ಬಳಿ ಹಣ ಕೇಳಲಾಗದೆ ಮಾನಸಿಕವಾಗಿ ತೊಳಲಾಡುತ್ತಿದೆ. ಆಗ ‘ಪ್ರಜಾವಾಣಿ’ಯು ಹಣಕಾಸು ನೆರವಿನ ಸಹಾಯಹಸ್ತ ಚಾಚಿ ಶಿಕ್ಷಣಕ್ಕೆ ದಾರಿ ತೋರಿತು. ನನ್ನಂತಹ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವ ‘ಪ್ರಜಾವಾಣಿ’ಯ ಅಕ್ಷರ ದಾಸೋಹದ ಕಾರ್ಯ ನಿರಂತರವಾಗಿ ಸಾಗಲಿ.

–ಎನ್‌.ಶ್ರೀಹರ್ಷ, ಗೋಪಸಂದ್ರ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ

____

ಪತ್ರಿಕೆಗೆ ಧನ್ಯವಾದ

ತಾಯಿ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಕುಟುಂಬ ನಿರ್ವಹಣೆಗೆ ಮತ್ತು ನನ್ನ ಶಿಕ್ಷಣಕ್ಕೆ ತಾಯಿಯ ದುಡಿಮೆಯೇ ಆಧಾರ. ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಕಾರ್ಖಾನೆ ಬಂದ್ ಆಗಿದ್ದರಿಂದ ಮನೆ ನಡೆಸುವುದೇ ಕಷ್ಟವಾಗಿತ್ತು. ಅಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ‘ಪ್ರಜಾವಾಣಿ’ ನೀಡಿದ ಹಣಕಾಸು ನೆರವಿನಿಂದ ವಿದ್ಯಾಭ್ಯಾಸಕ್ಕೆ ಸಹಾಯವಾಯಿತು. ನನ್ನ ಓದಿಗೆ ನೆರವಾದ ಪತ್ರಿಕೆಗೆ ಧನ್ಯವಾದ.

–ಸಿ.ವರ್ಷಾ, ನಾಗೊಂಡನಹಳ್ಳಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT